Home ಕರ್ನಾಟಕ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ – ಕಾಲೇಜಿನಲ್ಲಿ ಪೇರೆಂಟ್ ಓರಿಯಂಟೇಷನ್ ಕಾರ್ಯಕ್ರಮ

ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ – ಕಾಲೇಜಿನಲ್ಲಿ ಪೇರೆಂಟ್ ಓರಿಯಂಟೇಷನ್ ಕಾರ್ಯಕ್ರಮ

25
0

ಮುಂಗಳೂರು: ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜು ಅಡ್ಯಾರಿನಲ್ಲಿ ಪೇರೆಂಟ್ ಓರಿಯಂಟೇಷನ್ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು.

2024-25ನೇ ಶೈಕ್ಷಣಿಕ ಸಾಲಿನ ರೂಪುರೇಷೆ, ಕಾರ್ಯ ವಿಧಾನ, ನಿಯಮ ನಿಬಂಧನೆಗಳ ಬಗ್ಗೆ ಮಾಹಿತಿಯನ್ನು ಹೆತ್ತವರಿಗೆ ನೀಡಲಾಯಿತು. ಸಹ ಪ್ರಾಂಶುಪಾಲರಾದ ಸೌಸ್ರೀನ್, ಅಕಾಡೆಮಿಕ್ ಸಂಯೋಜಕರಾದ ಝಾಹಿದ, ಸಲ್ಮಾ, ಸಂಶಾದ್ ಹಾಗೂ ಬಿಲ್ಕೀಸ್ ಇವರು ಈ ಬಗ್ಗೆ ಮಾಹಿತಿ ನೀಡಿದರು.

ಇಸ್ಲಾಮಿಕ್ ಪ್ರಾಂಶುಪಾಲರಾದ ಹನೀಫ್ ಅವರು ಇಸ್ಲಾಮಿಕ್ ಪಠ್ಯಕ್ರಮದ ಮಾಹಿತಿ ನೀಡಿದರು. ಸಮಾರಂಭದಲ್ಲಿ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅದೇ ರೀತಿ 2023-24ನೇ ಸಾಲಿನಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಅಬ್ರಾರ್ ಶೇಕ್ ಅನ್ಸಾರ್ ಹಾಗೂ ಮಹಮ್ಮದ್ ಹಸನ್ ಸಾಬಿಕ್ ಇವರನ್ನು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಹಾಗೂ ಈ ವಿದ್ಯಾರ್ಥಿಗಳಿಗೆ ಹಿಫ್ಝ್ ಕಲಿಸಿದ ಉಸ್ತಾದರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ KPCC ಉಪಾಧ್ಯಕ್ಷರಾದ ಎಂ. ಎ. ಗಫೂರ್, ಬರಕಾ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಬಜ್ಪೆ ಹಾಗೂ ಎಂ.ಡಿ. ನರ್ಗಿಸ್ ಅಶ್ರಫ್, ಪಿ.ಯು. ವಿಭಾಗದ ಪ್ರಾಂಶುಪಾಲರಾದ ಆಶುರ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಲ್ಮಾ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here