Home Uncategorized ಬಲ್ಹರ್ಷಾ ರೈಲ್ವೆ ಜಂಕ್ಷನ್​ನಲ್ಲಿ ಸ್ಕೈವಾಕ್‌ನ ಸ್ಲಾಬ್‌ ಕುಸಿತ, ಕೆಲವರಿಗೆ ಗಾಯ, ಪರಿಹಾರ ಘೋಷಿಸಿದ ರೈಲ್ವೆ ಇಲಾಖೆ

ಬಲ್ಹರ್ಷಾ ರೈಲ್ವೆ ಜಂಕ್ಷನ್​ನಲ್ಲಿ ಸ್ಕೈವಾಕ್‌ನ ಸ್ಲಾಬ್‌ ಕುಸಿತ, ಕೆಲವರಿಗೆ ಗಾಯ, ಪರಿಹಾರ ಘೋಷಿಸಿದ ರೈಲ್ವೆ ಇಲಾಖೆ

15
0

ಮುಂಬೈ: ಬಲ್ಹರ್ಷಾ ರೈಲ್ವೆ ಜಂಕ್ಷನ್​ನ ಸ್ಕೈವಾಕ್‌ ಸ್ಲ್ಯಾಬ್‌ ಕುಸಿದು ಬಿದ್ದಿದ್ದು, ನಾಲ್ವರಿಗೆ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಇಂದು(ನವೆಂಬರ್ 27) ಮಹಾರಾಷ್ಟ್ರದ ಚಂದಾಪುರದ ಬಲ್ಹರ್ಷಾ ಜಂಕ್ಷನ್​ನಲ್ಲಿರುವ ಸ್ಕೈವಾಕ್‌ ಸ್ಲ್ಯಾಬ್‌ ಕುಸಿದುಬಿದ್ದಿದೆ.

ಘಟನೆಯಲ್ಲಿ ನಾಲ್ವರಿಗೆ ಮಾತ್ರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಇದರಿಂದ ಭಾರಿ ದುರಂತ ತಪ್ಪಿದೆ.

#WATCH | Slabs fall off of a foot over bridge at Balharshah railway junction in Maharashtra’s Chandrapur; people feared injured pic.twitter.com/5VT8ry3ybe

— ANI (@ANI) November 27, 2022

ಇನ್ನು ಘಟನೆಯಲ್ಲಿ ಗಾಯಗೊಂಡಿರುವವರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಣೆ ಮಾಡಿದೆ. ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

LEAVE A REPLY

Please enter your comment!
Please enter your name here