ಆಂಧ್ರ ಪ್ರದೇಶದ ವೈಎಸ್ಆರ್ ಜಿಲ್ಲೆಯ ಕೊಂಡಾಪುರ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಸೋಮವಾರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಬಳ್ಳಾರಿಯ ಜಿಲ್ಲೆಯ ಕಂಪ್ಲಿಯ ಏಳು ಜನ ಮೃತಪಟ್ಟಿದ್ದಾರೆ. ಬಳ್ಳಾರಿ: ಆಂಧ್ರ ಪ್ರದೇಶದ ವೈಎಸ್ಆರ್ ಜಿಲ್ಲೆಯ ಕೊಂಡಾಪುರ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಸೋಮವಾರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಬಳ್ಳಾರಿಯ ಜಿಲ್ಲೆಯ ಕಂಪ್ಲಿಯ ಏಳು ಜನ ಮೃತಪಟ್ಟಿದ್ದಾರೆ.
ಇಂದು ಬೆಳಗಿನ ಜಾವ ಕೊಂಡಾಪುರ ಮಂಡಲದ ಏಟೂರು ಗ್ರಾಮದ ಚಿತ್ರಾವತಿ ಸೇತುವೆ ಸಮೀಪ ಈ ಅಪಘಾತ ಸಂಭವಿಸಿದ್ದು, ಕ್ರೂಸರ್ ನಲ್ಲಿದ್ದ ಏಳು ಜನ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಇದನ್ನು ಓದಿ: ಗದಗದಲ್ಲಿ ಭೀಕರ ಸರಣಿ ಅಪಘಾತ: 2 ಬೈಕ್ ಗೆ ಕಾರು ಡಿಕ್ಕಿ, 3 ಸಾವು
ಅಪಘಾತದಲ್ಲಿ ಕಂಪ್ಲಿಯ ಲಕ್ಷ್ಮಿದೇವಿ, ಅವರ ಸಹೋದರಿಯರಾದ ಸುಭದ್ರ, ಸುಮಾ, ಪೆದ್ದಕ್ಕ ಮತ್ತು ಪೆದ್ದಕ್ಕ ಪುತ್ರ ದಿಲೀಪ್ ಕುಮಾರ್ ರೆಡ್ಡಿ ಅವರು ಮೃತಪಟ್ಟಿದ್ದಾರೆ. ಲಕ್ಷ್ಮಿದೇವಿ ಅವರ ಮಕ್ಕಳಾದ ಮೇಘನಾ ರೆಡ್ಡಿ ಮತ್ತು ಶಿಲ್ಪಾ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.