Home Uncategorized ಬಾಗಲಕೋಟೆ: ವೃದ್ಧನ ಹೊಟ್ಟೆಯಲ್ಲಿದ್ದ 187 ಕಾಯಿನ್​ಗಳನ್ನು ಹೊರತೆಗೆದ HSK ಆಸ್ಪತ್ರೆ ವೈದ್ಯರು

ಬಾಗಲಕೋಟೆ: ವೃದ್ಧನ ಹೊಟ್ಟೆಯಲ್ಲಿದ್ದ 187 ಕಾಯಿನ್​ಗಳನ್ನು ಹೊರತೆಗೆದ HSK ಆಸ್ಪತ್ರೆ ವೈದ್ಯರು

34
0

ಬಾಗಲಕೋಟೆ: ಜಿಲ್ಲೆಯ HSK ಆಸ್ಪತ್ರೆ ವೈದ್ಯರು ವ್ಯಕ್ತಿ ಹೊಟ್ಟೆಯಲ್ಲಿದ್ದ 187 ಕಾಯಿನ್​ಗಳನ್ನು ಹೊರತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 187 ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ. ವೈದ್ಯರ ಶಸ್ತ್ರಚಿಕಿತ್ಸೆಗೆ ಪ್ರಶಂಸೆ ವ್ಯಕ್ತವಾಗಿದೆ.

ರಾಯಚೂರು ಜಿಲ್ಲೆ ಲಿಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ದ್ಯಾ‌ಮಪ್ಪ ಹರಿಜನ ಎಂಬ 58 ವರ್ಷದ ವೃದ್ಧ ನಾಣ್ಯ ನುಂಗಿದ್ದರು. ಸದ್ಯ HSK ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ಹೊರ ತೆಗೆದಿದ್ದಾರೆ. ಡಾ ಈಶ್ವರ ಕಲಬುರ್ಗಿ ಅವರು ಈ ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ.

ನಿನ್ನೆ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ವೃದ್ದ ದಾಖಲಾಗಿದ್ದರು. ಎಕ್ಸರೇಯಲ್ಲಿ ನಾಣ್ಯಗಳು ಪತ್ತೆಯಾಗಿದ್ದವು. ವ್ಯಕ್ತಿ ಜೀವ ಅಪಾಯದಲ್ಲಿರುವುದನ್ನು ಅರಿತ ವೈದ್ಯರು ಎಂಡೋಸ್ಕೋಪಿ ಮಾಡಿ ನಾಣ್ಯಗಳನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: ಹೊಟ್ಟೆಯೊಳಗಿನ ಅಂಗಾಂಗಗಳು ಉಲ್ಟಾಪಲ್ಟ; ಅಸಾಧಾರಣ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿ ಕಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು

ಇನ್ನು ವೃದ್ಧ ದ್ಯಾ‌ಮಪ್ಪ ಹರಿಜನ ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳಿದ್ದಾರೆ. ಪತ್ನಿ‌ ಮೇಲೆ ಸಂಶಯ ಹಿನ್ನೆಲೆ ಕಳೆದ 35 ವರ್ಷದಿಂದ ದ್ಯಾಮಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಚಿಕಿತ್ಸೆ ಕೊಡಿಸಿದ ನಂತರ ಗುಣಮುಖರಾಗಿದ್ದರು. ಆದರೆ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ವೇಳೆ ನಾಣ್ಯ ನುಂಗಿದ್ದರು. ಮಂಗಳವಾರ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಮಾರೇಶ್ವರ ಆಸ್ಪತ್ರೆಯಲ್ಲಿ ಈಶ್ವರ ಕಲಬುರ್ಗಿ ಹಾಗೂ ತಂಡ ಎರಡೂವರೆ ತಾಸುಗಳ ಕಾಲ‌ನಿರಂತರ ಶಸ್ತ್ರ ಚಿಕಿತ್ಸೆ ಮಾಡಿ ಅಂದಾಜು ಒಂದು ಕೆಜಿ ತೂಕದ 187 ನಾಣ್ಯಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರ ಮಗ ರವಿ ಕುಮಾರ, ತಂದೆ ಕೃಷಿ ಕೆಲಸ ಮಾಡುತ್ತಿದ್ದರು. ಎರಡು ಎಕರೆ ಹೊಲ ಇದೆ. ಪಂಚಾಯಿತಿಯಲ್ಲಿ ಕಸ ಗೂಡಿಸುವ ಸಿಪಾಯಿ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಸೋಮವಾರ ಲಿಂಗಸುಗೂರಿನಲ್ಲಿ ತೋರಿಸಿ ಮಂಗಳವಾರ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆಪರೇಷನ್ ಯಶಸ್ವಿಯಾಗಿದೆ. ವೈದ್ಯರಿಗೆ ಧನ್ಯವಾದ ಹೇಳ್ತಿವಿ. ಇಷ್ಟೊಂದು ನಾಣ್ಯ ನುಂಗಿದ್ದು ನಮಗೂ ಕೂಡ ಅಚ್ಚರಿ ತಂದಿದೆ ಎಂದರು.

LEAVE A REPLY

Please enter your comment!
Please enter your name here