Home Uncategorized ಬಾಡಿಗೆ ಕಟ್ಟುವಂತೆ ನೋಟಿಸ್: ಡಿಪೋ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ...

ಬಾಡಿಗೆ ಕಟ್ಟುವಂತೆ ನೋಟಿಸ್: ಡಿಪೋ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ

54
0

ಮೈಸೂರು: ಡಿಪೋ ಅಧಿಕಾರಿ ಮೇಲೆ ಹಲ್ಲೆ (Assault) ನಡೆಸಲು ಮಹಿಳೆ ಮಚ್ಚು ಹಿಡಿದು ಬಂದಿರುವಂತಹ ಘಟನೆ ನಗರದ ಸಾತಗಳ್ಳಿ ಬಸ್ ಡಿಪೋನಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಶಫಿ ಪತ್ನಿಯಿಂದ ಕೃತ್ಯ ಆರೋಪ ಮಾಡಲಾಗಿದೆ. ಬಸ್ ಡಿಪೋ ಜಾಗವನ್ನು ಕಾಂಗ್ರೆಸ್​ ಮುಖಂಡ ಶಫಿ ಬಾಡಿಗೆಗೆ ಪಡೆದು ಕಾಲೇಜು ನಡೆಸುತ್ತಿದ್ದ. 1 ಕೋಟಿ 80 ಲಕ್ಷ ಬಾಡಿಗೆ ಬಾಕಿ ಆರೋಪ ಮಾಡಲಾಗಿದೆ. ಬಾಡಿಗೆ ಕಟ್ಟದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಡಿಪೋ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡು ಮಚ್ಚು ಹಿಡಿದು ಶಫಿ ಹಾಗೂ ಆತನ‌ ಪತ್ನಿ ಡಿಪೋಗೆ ಬಂದು, ಅಧಿಕಾರಿಗಳ ಮುಂದೆ ರಂಪಾಟ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದಲ್ಲದೇ ಅಧಿಕಾರಿಗೆ ದಂಪತಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ದಂಪತಿಯ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ದಂಪತಿ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ.

ವಿದ್ಯುತ್ ತಂತಿ ತುಳಿದು ರೈತ ಸಾವು

ಶಿವಮೊಗ್ಗ: ಹೊಸನಗರ ತಾಲೂಕಿನ ನಂಜವಳ್ಳಿ ಗ್ರಾಮದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಶೇಷಗಿರಿ(45) ಮೃತ ರೈತ. ಮನೆಯ ಬಳಿ ಹೂವು ಕೀಳಲು ಹೋದಾಗ ಪತ್ನಿಗೆ ಕರೆಂಟ್ ಶಾಕ್ ಹೊಡೆದಿತ್ತು. ಈ ವೇಳೆ ಪತ್ನಿ ರಕ್ಷಣೆಗೆ ಮುಂದಾದಾಗ ಗಮನಿಸದೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ರೈತ ಮಹಿಬೂಬ್​(38) ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಪಂಪ್​ಸೆಟ್​ ಆನ್ ಮಾಡಲು ಹೋಗಿದ್ದಾಗ ಅವಘಡ ನಡೆದಿದೆ. ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Crime News: ಡಿಜಿ ಹಳ್ಳಿಯಲ್ಲಿ ಲಾಂಗ್ ಬೀಸಿ ದಾಂಧಲೆ ಮಾಡುತ್ತಿದ್ದ ರೌಡಿ ಅರೆಸ್ಟ್

ಬೈಕಿಗೆ ಲಾರಿ ಡಿಕ್ಕಿ, ರೈತ ಸಾವು

ದಾವಣಗೆರೆ: ವಿಂಡ್​ ಫ್ಯಾನ್​ ಕಂಪನಿಗೆ ಸೇರಿದ ಲಾರಿ ಡಿಕ್ಕಿ, ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬುಳ್ಳನಳ್ಳಿ ಬಳಿ ನಡೆದಿದೆ. ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳ್ತಿದ್ದ ರೈತ ಮೂರ್ತ್ಯಪ್ಪ(36) ಸಾವನ್ನಪಿದ್ದಾರೆ. ಬೈಕ್​ನಲ್ಲಿ ರೈತ ಮೂರ್ತ್ಯಪ್ಪ ಜಮೀನಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮಣ್ಣು ಸಾಗಣೆ ಮಾಡುತ್ತಿದ್ದ ವಿಂಡ್​ ಫ್ಯಾನ್ ಕಂಪನಿಗೆ ಸೇರಿದ ಲಾರಿ, ರೈತನಿಗೆ ಡಿಕ್ಕಿ ಹೊಡೆದಿದೆ. ಜಗಳೂರು ತಾಲೂಕಿನಲ್ಲಿ ವಿಂಡ್ ಫ್ಯಾನ್ ಕಂಪನಿ ಲಾರಿಗಳ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ, ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮಣ್ಣು ಸಾಗಣೆ ಹೆಸರಿನಲ್ಲಿ ನಿತ್ಯ ನೂರಾರು ಲಾರಿಗಳ ಸಂಚಾರ ಮಾಡುತ್ತಿದೆ. ಈ ಘಟನೆ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣದ ಬಗ್ಗೆ ಜಗಳೂರು ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here