Home Uncategorized ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ; ಕ್ಷಿಪ್ರ ವಿಚಾರಣೆ ನಡೆಸಿ ಆರೋಪಿಗೆ ಗಲ್ಲು ವಿಧಿಸಿದ ನ್ಯಾಯಾಲಯ

ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ; ಕ್ಷಿಪ್ರ ವಿಚಾರಣೆ ನಡೆಸಿ ಆರೋಪಿಗೆ ಗಲ್ಲು ವಿಧಿಸಿದ ನ್ಯಾಯಾಲಯ

23
0

ಮುಝಫರ್ ನಗರ: ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರಣೆ ಕೇವಲ 64 ದಿನಗಳಲ್ಲಿ ಪೂರ್ಣಗೊಳಿಸಿದ, ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ಸಂಭವ ವರದಿಯಾಗಿದೆ.

ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪದಲ್ಲಿ ಕ್ಷಿಪ್ರ ವಿಚಾರಣೆ ಪೂರ್ಣಗೊಳಿಸಿದ ಉತ್ತರ ಭಾರತದ ಫರೂಕಾಬಾದ್ ನ್ಯಾಯಾಲಯ 21 ವರ್ಷದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆರೋಪಿಗೆ 2.2 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಈ ಪೈಕಿ ಅರ್ಧದಷ್ಟು ಮೊತ್ತವನ್ನು ಸಂತ್ರಸ್ತೆಯ ಪೋಷಕರಿಗೆ ನೀಡಲು ನ್ಯಾಯಾಲಯ ಸೂಚಿಸಿದೆ.

2023 ಸೆಪ್ಟೆಂಬರ್ 12ರಂದು ಈ ಕೃತ್ಯ ನಡೆದಿತ್ತು. ನಗರದ ಹೊರವಲಯದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಅನೂಜ್ ಕಟಿಯಾರ್ ಹೇಳಿದ್ದಾರೆ.

ಪೊಲೀಸರು ಘಟನೆ ನಡೆದ 24 ಗಂಟೆಗಳ ಒಳಗಾಗಿ ಅದೇ ಗ್ರಾಮದ ಒಬ್ಬ ಅಪ್ರಾಪ್ತ ವಯಸ್ಸಿನ ಯುವಕ ಸೇರಿದಂತೆ ಇಬ್ಬರು ಶಂಕಿತರನ್ನು ಬಂಧಿಸಿದ್ದರು.

“ಎರಡು ತಿಂಗಳ ವಿಚಾರಣೆ ಬಳಿಕ ಪೋಕ್ಸೋ ನ್ಯಾಯಾಲಯ, ಈ ಪ್ರಕರಣದ ತೀವ್ರತೆಯನ್ನು ಗಮನಿಸಿ, ಬುಧವಾರ ಆರೋಪಿಗೆ ಮರಣ ದಂಡನೆ ವಿಧಿಸಿದೆ. ಯಾವುದೇ ಪ್ರಚೋದನೆ ಇಲ್ಲದೇ ನಡೆದ ಕೃತ್ಯ ಇದಾಗಿದ್ದು, ಕೇವಲ ತನ್ನ ಚಪಲ ತೀರಿಸಿಕೊಳ್ಳಲು ಇಂಥ ಹೇಯ ಕೃತ್ಯ ಎಸಗಲಾಗಿದೆ. ಆರೋಪಿಗೆ ತಾನು ತಪ್ಪು ಮಾಡಿದ ಕೀಳರಿಮೆಯೂ ಇಲ್ಲ. ಆದ್ದರಿಂದ ಈ ಪ್ರಕರಣ ತೀರಾ ವಿರಳಾತಿವಿರಳ ಪ್ರಕರಣ ಎಂದು ಎಡಿಜಿಸಿ ಪ್ರದೀಪ್ ಸಿಂಗ್ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here