‘ಯಾವ ರೀತಿಯ ಕೆಲಸ ಕೊಟ್ಟರೂ ಮಾಡುತ್ತೇನೆ’ ಎನ್ನುವ ಸಿರಿಗೆ ಮಾಡಲಾಗದ ಕೆಲಸ ಯಾವುದು? ದಿನಕ್ಕೊಮ್ಮೆಯಾದರೂ ಕ್ರಶ್ ಆಗುವ ಚಾಕಲೆಟ್ ಬಾಯ್ ಸ್ನೇಹಿತ್, ‘ತುಂಬ ಬೇಗ ಕ್ರಶ್ ಆಗತ್ತೆ ನೋಡೋಣ’ ಎಂದು ಎದುರು ನೋಡುತ್ತಿರುವ ಫಿಟ್ ಗೈ ಮೈಕೆಲ್ ಈ ಇಬ್ಬರ ಕಣ್ಣ ಇಶಾರೆಯ ತುದಿಯಲ್ಲಿರುವ ಇಶಾನಿ ‘ಮನೆಯೊಳಗೆ ಯಾರಾದ್ರೂ ಚೆನ್ನಾಗಿದ್ರೆ….’ ಎಂದು ಏನೇನೋ ಆಸೆ ತುಂಬಿಕೊಂಡಿದ್ದಾರೆ. ಹಗುರವಾಗಿ ಮಾತಾಡಿದ್ರೆ ಅವರ ಸ್ಕ್ರೂ ಟೈಟ್ ಮಾಡ್ತೀನಿ ಅಂತ ನಗುನಗ್ತಾನೇ ಹೇಳೋ ನೀತು, ನನ್ನೊಳಗಿನ ಫೈಟರ್‍ನ ಜನರು ನೋಡ್ತಾರೆ ಅಂತಿರೋ ತನಿಷಾ ಎದುರಾಬದಿರಾದರೆ ಏನಾಗಬಹುದು? ಹುಚ್ಚ ವೆಂಕಟ್ ಅನ್ನೇ ಆದರ್ಶವಾಗಿಟ್ಟುಕೊಂಡು ಮನೆಯೊಳಗೆ ಹೊಕ್ಕಿರುವ ಸಂತೋಷ್, ನಾನ್ ಯಾರ ಜೊತೆಗೂ ಮಿಂಗಲ್ ಆಗಲ್ಲ ಅನ್ನೋ ಸಂಗೀತಾ… ನಂಗೆ ಯಾವ ಕೆಲಸವೂ ಬರಲ್ಲ ಅಂತಿರೋ ನಮ್ರತಾ, ಡ್ರೊನ್ ಪ್ರತಾಪ್, ಬುಲೆಟ್ ರಕ್ಷಕ್, ಸ್ನೇಕ್ ಶ್ಯಾಮ…. ಅಬ್ಬಬ್ಬಾ! ಎಷ್ಟೊಂದು ಪಾತ್ರಗಳು… ಒಂದಕ್ಕಿಂತ ಒಂದು ಭಿನ್ನ ವ್ಯಕ್ತಿತ್ವಗಳು.
ಬಿಗ್‌ಬಾಸ್ ಮನೆಯೊಳಗಿನ ಕಂಟೆಸ್ಟೆಂಟ್‌ಗಳೆಲ್ಲ ಒಂದೇ ದಿನದಲ್ಲಿ ಇಂಟ್ರೆಸ್ಟಿಂಗ್ ಅನಿಸಲು ಶುರುವಾಗಿದ್ದಾರಲ್ವಾ? ಈಗಷ್ಟೇ ದೊಡ್ಮನೆಯೊಳಗೆ ತಮ್ಮ ‘ಜಾಗ’ವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಈ ಸ್ಪರ್ಧಿಗಳ ಬ್ಯಾಕ್‌ಸ್ಟೋರಿ ಏನು? ಅವರ ಇಷ್ಟ-ಕಷ್ಟಗಳು ಏನೇನು? ಒಟ್ಟಿಗೆ ನೂರು ದಿನ ಕಳೆಯುವ ಆಸೆಯಲ್ಲಿ ಮನೆಯೊಳಗೆ ಅಡಿಯಿಟ್ಟಿರುವ ಸ್ಪರ್ಧಿಗಳ ಹಿನ್ನೆಲೆ, ಸ್ವಭಾವಗಳನ್ನು ಪರಿಚಯಿಸುವ ‘ಬಿಗ್ ಇನ್’ ಸಂದರ್ಶನಗಳನ್ನು ಎಕ್ಸ್‌ಕ್ಲೂಸೀವ್ ಆಗಿ JioCinemaದಲ್ಲಿ ನೋಡಬಹುದು. ಮನೆಯೊಳಗೆ ಹೋಗುವುದಕ್ಕೂ ಆಡಿದ ಮಾತಿಗೂ, ಮನೆಯೊಳಗಿನ ಕೃತಿಗೂ ತಾಳೆಯಾಗುತ್ತದೆಯಾ? ಗೊತ್ತಾಗಲು ಮೊದಲು ನೀವು JioCinemaದಲ್ಲಿ ‘ಬಿಗ್‌ಇನ್ ಇಂಟರ್‍ವ್ಯೂಸ್ ಗಳನ್ನು https://jiocinema.onelink.me/fRhd/vr7dzgkp ಲಿಂಕ್ ಬಳಸಿ ನೋಡಬೇಕು. ನಂತರ ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ನ ಪ್ರತಿ ಕ್ಷಣಗಳನ್ನೂ JioCinema 24 ಗಂಟೆ ಲೈವ್ ಚಾನಲ್‌ನಲ್ಲಿ ವೀಕ್ಷಿಸಬೇಕು!
The post ಬಿಗ್‌ಬಾಸ್ ಸ್ಪರ್ಧಿಗಳ ಬಿಗ್ ಇನ್ ಇಂಟರ್‍ವ್ಯೂಗಳು :ಎಕ್ಸ್‌ಕ್ಲೂಸೀವ್ ಆಗಿ ವೀಕ್ಷಿಸಿ JioCinemaದಲ್ಲಿ appeared first on Ain Live News.