Home Uncategorized ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬಡ್ಡಿ ಆಟದಂತೆ: ಕಾಂಗ್ರೆಸ್‌ ಲೇವಡಿ

ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬಡ್ಡಿ ಆಟದಂತೆ: ಕಾಂಗ್ರೆಸ್‌ ಲೇವಡಿ

45
0

ಬೆಂಗಳೂರು: ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬಡ್ಡಿ ಆಟದಂತೆ ಇದೆ. ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಈ ಸಂಬಂಧ ಸೋಮವಾರ ʻಎಕ್ಸ್‌ʻ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ʻಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬ್ಬಡ್ಡಿ ಆಟದಂತೆ ಇದೆ. ಅದರಲ್ಲಿ ಸಂತೋಷ ಕೂಟ vs ಬಿಎಸ್‌ ವೈ ಕೂಟದ ನಡುವಿನ ಆಟದಲ್ಲಿ ಒಮ್ಮೊಮ್ಮೆ ಸಂತೋಷ ಕೂಟದ ಆಟ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಬಿಎಸ್‌ ವೈ ಕೂಟದ ಮೇಲುಗೈ ಸಾಧಿಸುತ್ತದೆʻ ಎಂದು ವ್ಯಂಗ್ಯವಾಡಿದೆ.

ʻಸದ್ಯ ನೇಮಕವಾದ ಪದಾಧಿಕಾರಿಗಳನ್ನು ನೋಡಿ ಇದು ಕೆಜೆಪಿ ಪಾರ್ಟ್2 ಎಂದು ಸ್ವತಃ ಬಿಜೆಪಿ ನಾಯಕರೇ ರೊಚ್ಚಿಗೆದ್ದಿದ್ದಾರೆʻ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here