ಬೆಂಗಳೂರು: ಬಿಜೆಪಿ ತೊರೆದು ಯಾರೂ ಕಾಂಗ್ರೆಸ್ಗೆ ಹೋಗ್ತಿಲ್ಲ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಪಕ್ಷ ತೊರೆಯಲ್ಲ, ಈಗಾಗಲೇ ನಾವು ಪೂರ್ಣಿಮಾ ಶ್ರೀನಿವಾಸ್ ಜೊತೆ ಮಾತಾಡಿದ್ದೇವೆ. ಇನ್ನು ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡ್ತಿರುವ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಒಪ್ಪಿಕೊಂಡ ವಿಚಾರ ಬಿಜೆಪಿ ಕಚೇರಿಯಲ್ಲಿ ಪರಿಷತ್ ಸದಸ್ಯ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್: ಪರೋಕ್ಷವಾಗಿ ಶೆಡ್ಡಿಂಗ್ ಬಗ್ಗೆ ಸತ್ಯ ಒಪ್ಪಿಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್!
ರೈತರಿಗೆ ಸಂಪೂರ್ಣ ವಿದ್ಯುತ್ ಕಟ್ ಮಾಡ್ತಿದ್ದಾರೆ ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕೈದು ಸಲ ವಿದ್ಯುತ್ ತೆಗೆಯುತ್ತಿದ್ದಾರೆ ಕೈಗಾರಿಗಳಿಗೆ ವಿದ್ಯುತ್ ಸಿಗದೇ ಸಮಸ್ಯೆ ಆಗಿದೆ ಈ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಸರ್ಕಾರ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ನಿಂದಾಗಿ ಕೈಗಾರಿಕೆಗಳಿಗೆ, ಐಟಿ ಉದ್ಯಮಗಳಿಗೂ ತೊಂದರೆ ಆಗ್ತಿದೆ ಲೋಡ್ ಶೆಡ್ಡಿಂಗ್ ತೀವ್ರಗೊಂಡರೆ ಅನೇಕ ಕಂಪೆನಿಗಳು ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಹೋಗುವ ಸಾಧ್ಯತೆ ಇದೆ ವಿದ್ಯುತ್ ಪೂರೈಕೆಯಲ್ಲಿ ಒಂದು ಕಡೆ ಸರ್ಕಾರ ವ್ಯತ್ಯಯ ಮಾಡ್ತಿದೆ ಇನ್ನೊಂದು ಕಡೆ ಉಚಿತ ವಿದ್ಯುತ್ ಯೋಜನೆ ಹಳ್ಳ ಹಿಡಿದಿದೆ ಉಚಿತ ವಿದ್ಯುತ್ ಕೊಡೋದಿರ್ಲಿ, ಡಬಲ್ ವಿದ್ಯುಥ ಬಿಲ್ ಬರ್ತಿದೆ ರಾಜ್ಯಾದ್ಯಂತ ಬಿಜೆಪಿಯಿಂದ ಜನಾಂದೋಲನ ಹೋರಾಟಕ್ಕೆ ಮುಂದಾಗ್ತೇವೆ ಎಂದು ಹೇಳಿದರು.
The post ಬಿಜೆಪಿ ತೊರೆದು ಯಾರೂ ಕಾಂಗ್ರೆಸ್ಗೆ ಹೋಗ್ತಿಲ್ಲ: MLC ರವಿಕುಮಾರ್ appeared first on Ain Live News.