ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೋಮುವಾದಿ ಬಿಜೆಪಿಯೊಂದಿಗೆ ಜಾತ್ಯಾತೀತ ಲೇಬಲ್ ಅಂಟಿಸಿಕೊಂಡಿರುವ ಜೆಡಿಎಸ್ ಮೈತ್ರಿಗೆ ಮುಂದಾಗಿದೆ. ಜಾತ್ಯಾತೀತ ತತ್ವ ಎಂಬುದು ಜೆಡಿಎಸ್ ಪಕ್ಷದ ಬೂಟಾಟಿಕೆಯಷ್ಟೆ.
ಇದನ್ನೂ ಓದಿ: ಯಾರಿಗೂ ಯಾರು ಅನಿವಾರ್ಯವಲ್ಲ; ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಇನ್ನೂ ಸಮಯವಿದೆ: ಕುಮಾರಸ್ವಾಮಿ ವ್ಯತಿರಿಕ್ತ ಹೇಳಿಕೆ!
ಯಾವುದೇ ಸೈದಾಂತಿಕ ಬದ್ಧತೆಯಿಲ್ಲದ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ. ಜಾತ್ಯಾತೀತ ಸಿದ್ದಾಂತಕ್ಕೆ ತಿಲಾಂಜಲಿ ಇಟ್ಟು ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸುತ್ತಿರುವ ಜೆಡಿಎಸ್ ಗೆ ಗೆ ಯಾವ ಸಿದ್ಧಾಂತವಿದೆ? ಎಂದು ಪ್ರಶ್ನಿಸಿದ್ದಾರೆ.
2ರಾಜ್ಯದಲ್ಲಿ BJP-JDS ಮೈತ್ರಿ, ಎರಡೂ ಪಕ್ಷದವರಿಗೂ ಅನ್ನ ಹಳಸಿತ್ತು.,ನಾಯಿ ಹಸಿದಿತ್ತು ಎಂಬಂತಾಗಿದೆ.ರಾಜ್ಯದಲ್ಲಿ BJP ದಿಕ್ಕಿಲ್ಲದ ದೋಣಿ ಹಾಗೂ JDS ಹಳಿಯಿಲ್ಲದ ರೈಲಿನಂತಾಗಿದೆ.ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿವೆ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 8, 2023
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ, ಎರಡೂ ಪಕ್ಷದವರಿಗೂ ಅನ್ನ ಹಳಸಿತ್ತು.,ನಾಯಿ ಹಸಿದಿತ್ತು ಎಂಬಂತಾಗಿದೆ. ರಾಜ್ಯದಲ್ಲಿ BJP ದಿಕ್ಕಿಲ್ಲದ ದೋಣಿ ಹಾಗೂ JDS ಹಳಿಯಿಲ್ಲದ ರೈಲಿನಂತಾಗಿದೆ. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿವೆ ಎಂದು ಗೇಲಿ ಮಾಡಿದ್ದಾರೆ.
1ಕೋಮುವಾದಿ BJPಯೊಂದಿಗೆ ಜಾತ್ಯಾತೀತ ಲೇಬಲ್ ಅಂಟಿಸಿಕೊಂಡಿರುವ JDS ಮೈತ್ರಿಗೆ ಮುಂದಾಗಿದೆ.ಜಾತ್ಯಾತೀತ ತತ್ವ ಎಂಬುದು JDS ಪಕ್ಷದ ಬೂಟಾಟಿಕೆಯಷ್ಟೆ.ಯಾವುದೇ ಸೈದಾಂತಿಕ ಬದ್ಧತೆಯಿಲ್ಲದ ಪಕ್ಷವೆಂದರೆ ಅದು JDS ಮಾತ್ರ.ಜಾತ್ಯಾತೀತ ಸಿದ್ದಾಂತಕ್ಕೆ ತಿಲಾಂಜಲಿ ಇಟ್ಟು ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸುತ್ತಿರುವ JDSಗೆ ಯಾವ ಸಿದ್ಧಾಂತವಿದೆ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 8, 2023