Home Uncategorized ಬಿಬಿಎಂಪಿ ಬಜೆಟ್‌: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತೀಕರಣಕ್ಕೆ ಪ್ರಮುಖ ಕೊಡುಗೆಗಳೇನು?: ಇಲ್ಲಿದೆ ಮಾಹಿತಿ

ಬಿಬಿಎಂಪಿ ಬಜೆಟ್‌: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತೀಕರಣಕ್ಕೆ ಪ್ರಮುಖ ಕೊಡುಗೆಗಳೇನು?: ಇಲ್ಲಿದೆ ಮಾಹಿತಿ

15
0

ಬೆಂಗಳೂರು : ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬಜೆಟ್  2024-25 ಮಂಡನೆ ಮಾಡಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಆರೋಗ್ಯ ಸೇವೆ ಉನ್ನತೀಕರಿಸಲು ಎರಡು ವರ್ಷಗಳಿಗೆ 200 ಕೋಟಿ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

► ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಾಲಿಕೆ ನಡುವಿನ ಸಮನ್ವಯವನ್ನು ಸುಗಮಗೊಳಿಸಲು. ಬೆಂಗಳೂರು ಆರೋಗ್ಯ ಆಯುಕ್ತರು ಎನ್ನುವ ಹೊಸ ಹುದ್ದೆಯನ್ನು ಸೃಜಿಸಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರೋಗ್ಯ ವ್ಯವಸ್ಥೆಯನ್ನು ಅವರ ಆಡಳಿತಾತ್ಮಕ ಸುಪರ್ದಿಯಲ್ಲಿ ತರಲಾಗುವುದು. ಇದರ ನಿರ್ವಹಣೆಗಾಗಿ ಈ ಸಾಲಿನಲ್ಲಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.

► ಪಾಲಿಕೆಯು ‘ಸಮಗ್ರ ಸದೃಢ ಆರೋಗ್ಯ’ ಹೆಸರಿನ ಯೋಜನೆ ಅಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ. ಇದರ ಭಾಗವಾಗಿ ಈ ಸಾಲಿನಲ್ಲಿ 25 ಕೋಟಿ ರೂ.ಗಳನ್ನು ಒದಗಿಸಲಾಗುವುದು.

► ಈ ಸಾಲಿನಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಿರ ಅಥವಾ ಮೊಬೈಲ್‌ ಮೋಡ್‌ನಲ್ಲಿ ಸ್ಥಾಪಿಸಲಾಗುವುದು ಹಾಗೂ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಯೋಜಿಸಲಾಗಿದೆ.

►‌ ಪಾಲಿಕೆಯ ಹೊಸ ರುದ್ರಭೂಮಿ ಹಾಗೂ ಚಿತಾಗಾರಗಳನ್ನು ನಿರ್ಮಾಣ ಮಾಡಲು 15 ಕೋಟಗಳನ್ನು ಒದಗಿಸಲಾಗಿದೆ.

► ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಹಾಗೂ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗಾಗಿ 4 ಘಟಕಗಳನ್ನು ನಿರ್ಮಿಸಲು ಈ ಸಾಲಿನಲ್ಲಿ ಒಟ್ಟು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

LEAVE A REPLY

Please enter your comment!
Please enter your name here