Home Uncategorized ಬಿಬಿಎಂಪಿ ಮುಖ್ಯ ಆಯುಕ್ತರಿಂದ ಚಿಲುಮೆಗೆ ಅನುಮತಿ; ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಬಗ್ಗೆ ಶುರುವಾದ...

ಬಿಬಿಎಂಪಿ ಮುಖ್ಯ ಆಯುಕ್ತರಿಂದ ಚಿಲುಮೆಗೆ ಅನುಮತಿ; ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಬಗ್ಗೆ ಶುರುವಾದ ಚರ್ಚೆ

17
0

ಬೆಂಗಳೂರು: ಚಿಲುಮೆ ಸಂಸ್ಥೆಯ ಮೇಲೆ ಮತಪಟ್ಟಿ ಪರಿಷ್ಕರಣೆಯಲ್ಲಿ ಗೋಲ್ಮಾಲ್ ನಡೆಸಿದ ಆರೋಪದಲ್ಲಿ ಈಗಾಗಲೇ ನಾಲ್ವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿ ಅರೆಸ್ಟ್ ಆಗಿದ್ದಾರೆ. ಸದ್ಯ ಅಧಿಕೃತವಾಗಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿ ವರ್ಗದಲ್ಲೇ ಗಂಭೀರ ಚರ್ಚೆ ಶುರುವಾಗಿದೆ.

ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು ಎಂದು ಈ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದರು. ಬೇರೆ ಯಾವುದೇ ಕೆಲಸಕ್ಕೆ ಅವಕಾಶ ನೀಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದರು. ಆದರೆ, ಚಿಲುಮೆ ಸಂಸ್ಥೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಬಿಬಿಎಂಪಿ ಕಮಿಷನರ್​ರೇ ಅನುಮತಿ ಕೊಟ್ಟಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು 20-8-2022 ರಂದು ಚಿಲುಮೆ ಸಂಸ್ಥೆಗೆ ಅನುಮತಿ ಪತ್ರ ಬರೆದಿದ್ದಾರೆ.

ಉಚಿತವಾಗಿ Voter helpline app ಹಾಗೂ ಗರುಡಾ ಆ್ಯಪ್ ಮೂಲಕ ವೋಟರ್ ಐಡಿಗಳನ್ನ ಆಧಾರ್ ಲಿಂಕ್ ಮಾಡುತ್ತೇವೆ ಎಂದು ಮನವಿ ಸಲ್ಲಿಸಿದ್ದ ಚಿಲುಮೆ ಸಂಸ್ಥೆಗೆ ತುಷಾರ್ ಗಿರಿನಾಥ್ ಅನುಮತಿ ನೀಡಿದ್ದಾರೆ. ಚಿಲುಮೆ ಸಂಸ್ಥೆಯ ಸಿಬ್ಬಂದಿ ಮನೆ ಮನೆಗೆ ಹೋಗಿ, ಬಿಎಲ್‌ಒಗಳ ಜೊತೆಗೂಡಿ ಆಧಾರ್ ಲಿಂಕ್ ಮಾಡಲು ಹಾಗೂ ಮತದಾರ ನೋಂದಣಾಧಿಗಳ ಜೊತೆಗೆ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಮೂಡಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಂದಲೇ ಅನುಮತಿ ಪತ್ರಕ್ಕೆ ಸಹಿ ಹಾಕಲಾಗಿದೆ. ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ ಆರೋಪದಡಿ ನಾಲ್ವರು ಆರ್​ಒಗಳನ್ನು ಸಸ್ಪೆಂಡ್ ಮಾಡಿ ಅರೆಸ್ಟ್ ಮಾಡಲಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಆದ್ರೆ ಅಕ್ರಮಕ್ಕೆ ಒಪ್ಪಿಗೆ ನೀಡಿದ್ದ ಆಯುಕ್ತ ತುಷಾರ್ ಗಿರಿನಾಥ್ ಅವರ ವಿರುದ್ಧ ಯಾವ ಕ್ರಮವೂ ಜರುಗಿಲ್ಲ. ಅಧಿಕೃತವಾಗಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು? ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿ ವರ್ಗದಲ್ಲೇ ಗಂಭೀರ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಬೆಂಗಳೂರು ವೋಟರ್ ಐಡಿ ಅಕ್ರಮ ಪ್ರಕರಣದ ತನಿಖೆಗಾಗಿ 7 IAS ಅಧಿಕಾರಿಗಳನ್ನು ನೇಮಿಸಿದ ಕೇಂದ್ರ ಚುನಾವಣೆ ಆಯೋಗ

ಗರುಡಾ ಆ್ಯಪ್​ನಿಂದ ಈಗಾಗಲೇ ಸಾವಿರಾರು ಮತದಾರರ ಹೆಸರು ಡಿಲಿಟ್ ಆಗಿದೆ

ಪ್ರತಿ ಚುನಾವಣೆ ಸಮಯದಲ್ಲಿ ಹೊಸದಾಗಿ ಸೇರ್ಪಡೆ, ಮೃತರು ಮತ್ತು ವಾಸಸ್ಥಳ ಬದಲಾವಣೆ ಮಾಡಿದವರ ಲೀಸ್ಟ್ ಡಿಲೀಟ್ ಮಾಡಲಾಗುತ್ತೆ. ಡಿಲೀಟ್ ಆಗಿರುವ ಅಷ್ಟೂ ಮತದಾರರ ಪಟ್ಟಿ ಚುನಾವಣೆ ಆಯೋಗಕ್ಕೆ ಸಿಗತ್ತೆ. ಜೊತೆಗೆ ಯಾರು ಯಾವ ಅಕೌಂಟ್ ನಿಂದ ಡಿಲೀಟ್ ಮಾಡಿದ್ದಾರೆ? ಡಿಲೀಟ್ ಗೆ ಯಾವ ಕಾರಣ ನೀಡಲಾಗಿದೆ ಎಂಬುದು ಉಲ್ಲೇಖ ಮಾಡಿರಬೇಕು. ಸೂಕ್ತ ಕಾರಣ ಹಾಗು ಸೂಕ್ತ ವ್ಯಕ್ತಿಗಳು ಡಿಲೀಟ್ ಆಗಿಲ್ಲದಿದ್ರೆ ಅದು ಅಪರಾಧ. ಸದ್ಯ ಈ ಬಗ್ಗೆ ಚುನಾವಣೆ ಆಯೋಗ ಹಗಲಿರುಳು ಪರಿಶೀಲನೆ ನಡೆಸುತ್ತಿದೆ. ಹೊಸದಾಗಿ ಸೇರ್ಪಡೆಯಾದ ಹಾಗು ಡಿಲೀಟ್ ಆಗಿರುವ ಸಾವಿರಾರು ಜನರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

LEAVE A REPLY

Please enter your comment!
Please enter your name here