Home Uncategorized ಬಿಬಿಎಂಪಿ ವ್ಯಾಪ್ತಿಯ 20 ಲಕ್ಷ ಆಸ್ತಿಗಳು ಗಣಕೀಕರಣಕ್ಕೆ ಕ್ರಮ

ಬಿಬಿಎಂಪಿ ವ್ಯಾಪ್ತಿಯ 20 ಲಕ್ಷ ಆಸ್ತಿಗಳು ಗಣಕೀಕರಣಕ್ಕೆ ಕ್ರಮ

18
0

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 20 ಲಕ್ಷ ಆಸ್ತಿಗಳನ್ನು ಗಣಕೀಕರಣಗೊಳಿಸಿ, ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಕಾವೇರಿ-2 ತಂತ್ರಾಂಶದೊಂದಿಗೆ ಪಾಲಿಕೆಯ ‘ನಮ್ಮ ಸ್ವತ್ತು’ ವ್ಯವಸ್ಥೆಯನ್ನು ಸಂಯೋಜನೆ ಮಾಡಲಾಗುವುದು ಎಂದು ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಟೌನ್‌ ಹಾಲ್ ನಲ್ಲಿ ಬಜೆಟ್ ಭಾಷಣದ ಮೇಲೆ ಮಾತನಾಡಿದ ಅವರು, ಆಸ್ತಿ ತೆರಿಗೆ ಮೇಲಿನ ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆದಾರರಿಗೆ ಓ.ಟಿ.ಎಸ್ ಜಾರಿಗೆ ತಂದಿದ್ದು, ಇದರಿಂದ 15 ಲಕ್ಷ ತೆರಿಗೆದಾರರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪಾಲಿಕೆಯಲ್ಲಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು ಮತ್ತು ಇದರಿಂದ 500 ಕೋಟಿ ರೂ.ಗಳಷ್ಟು ಜಾಹೀರಾತು ಆದಾಯವನ್ನು ಗಳಿಸುವ ನೀರಿಕ್ಷೆಯಿದೆ. ಒಟ್ಟು 6000 ಕೋಟಿಯ ರೂ. ಆಸ್ತಿ ತೆರಿಗೆ ಈ ಬಾರಿ ನಿರೀಕ್ಷಿಸಲಾಗಿದೆ. ಪ್ರೀಮಿಯಂ ಎಫ್ಎಆರ್ ವ್ಯವಸ್ಥೆಯನ್ನು ಜಾರಿಗೆ ತಂದು ಇದರಿಂದ 1000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here