Home Uncategorized ಬಿಬಿಎಂಪಿ ಶಿಕ್ಷಣ ಸಂಸ್ಥೆಗಳನ್ನು ವಿಲೀನಗೊಳಿಸದಂತೆ ಪ್ರತಿಭಟನೆ

ಬಿಬಿಎಂಪಿ ಶಿಕ್ಷಣ ಸಂಸ್ಥೆಗಳನ್ನು ವಿಲೀನಗೊಳಿಸದಂತೆ ಪ್ರತಿಭಟನೆ

18
0

ಬೆಂಗಳೂರು: ಬಿಬಿಎಂಪಿ ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಇಲಾಖೆಗೆ ವಿಲೀನಗೊಳಿಸುವುದನ್ನು ಖಂಡಿಸಿ ಬಿಬಿಎಂಪಿ ಶಿಕ್ಷಕ, ಉಪನ್ಯಾಸಕ ತರಗತಿಗಳನ್ನು ಬಹಿಷ್ಕರಿಸಿ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಸೋಮವಾರದಂದು ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ವ್ಯಾಪ್ತಿಯ ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಗಳನ್ನು ಬಿಬಿಎಂಪಿಯ ಸ್ವಾಯತ್ತತೆಗೆ ವಿರುದ್ಧವಾಗಿ ರಾಜ್ಯ ಶಿಕ್ಷಣ ಇಲಾಖೆಗೆ ವಿಲೀನ ಮಾಡಬಾರದು. ಶಿಕ್ಷಕರ ನೇಮಕ, ಶೈಕ್ಷಣಿಕ ಚಟುವಟಿಕೆಗಳ ನಿರ್ಧಾರ, ಎಲ್ಲವನ್ನೂ ನಿರ್ವಹಣೆಯನ್ನು ಬಿಬಿಎಂಪಿಯೇ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಬಿಬಿಎಂಪಿಯ ಶಿಕ್ಷಕರು, ಉಪನ್ಯಾಸಕರನ್ನು ತಕ್ಷಣ ಖಾಯಂಗೊಳಿಸಬೇಕು. ಬಿಬಿಎಂಪಿಯ ಶಿಕ್ಷಕರ, ಉಪನ್ಯಾಸಕರ ವೇತನವನ್ನು ಹೆಚ್ಚಿಸಬೇಕು. ಪ್ರತಿ ತಿಂಗಳು ಮೊದಲ ವಾರದೊಳಗೆ ವೇತನವನ್ನು ಬ್ಯಾಂಕ್ ಮೂಲಕ ಪಾವತಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದರು.

ಬಿಬಿಎಂಪಿಯ ಶಿಕ್ಷಕರು, ಉಪನ್ಯಾಸಕರಿಗೆ ವರ್ಷದ 12 ತಿಂಗಳು ಸಂಬಳ ನೀಡಬೇಕು. ನಿಯಮಾನುಸಾರ ಸಂಬಳ ಸಹಿತ ರಜೆಗಳು, ಪಿ ಎಫ್, ಜೀವವಿಮೆ ಇತ್ಯಾದಿ ಸರಕಾರಿ ಸೌಲಭ್ಯಗಳನ್ನು ನೀಡಬೇಕು. ಮೇಲ್ವಿಚಾರಣೆ, ತರಬೇತಿ ಹೆಸರಿನಲ್ಲಿ ನಡೆಯುತ್ತಿರುವ ಮೇಲಾಧಿಕಾರಿಗಳ ಕಿರುಕುಳ ನಿಲ್ಲಿಸಬೇಕು. ಬಿಬಿಎಂಪಿಯ ಶಿಕ್ಷಣ ಸಂಸ್ಥೆಗಳ ಮಕ್ಕಳ ಕಲಿಕೆಗೆ ಪೂರಕವಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾನಿರತ ಶಿಕ್ಷಕರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here