Home Uncategorized ಬೀದರ್‌ಗಿಂದು ಪ್ರಧಾನಿ ಮೋದಿ: ಡ್ರೋಣ್ ಹಾರಾಟಕ್ಕೆ ನಿಷೇಧ

ಬೀದರ್‌ಗಿಂದು ಪ್ರಧಾನಿ ಮೋದಿ: ಡ್ರೋಣ್ ಹಾರಾಟಕ್ಕೆ ನಿಷೇಧ

24
0

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ (ಅ.3) ನಗರದ ವಾಯುಸೇನೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ. ಬೀದರ್‌: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ (ಅ.3) ನಗರದ ವಾಯುಸೇನೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ.
    
ಪ್ರಧಾನಿ ಭದ್ರತೆ ಹಿನ್ನೆಲೆಯಲ್ಲಿ ನಗರದ ವಾಯುಸೇನೆ ತರಬೇತಿ ಕೇಂದ್ರ ಹಾಗೂ ಬೀದರ್‌ ನಗರದ ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ಅ.3ರಂದು ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ಸಾರ್ವಜನಿಕರು ಡ್ರೋಣ್ ಹಾರಿಸದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಮೋದಿ ಅವರು ತೆಲಂಗಾಣದ ನಿಜಾಮಾಬಾದ್‌ಗೆ ತೆರಳುವ ಮಾರ್ಗ ಮಧ್ಯದಲ್ಲಿ ನಗರದ ವಾಯುಸೇನೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡುವರು. ಮಧ್ಯಾಹ್ನ 1ಕ್ಕೆ ಛತ್ತೀಸಗಢದ ಜಗದಾಲಪುರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 1.50ಕ್ಕೆ ನಗರಕ್ಕೆ ಆಗಮಿಸುವರು. ಇಲ್ಲಿಂದ 2.15ಕ್ಕೆ ಸೇನಾ ಹೆಲಿಕಾಪ್ಟರ್‌ನಲ್ಲಿ ನಿಜಾಮಾಬಾದ್‍ಗೆ ಪ್ರಯಾಣಿಸುವರು.

ಅಲ್ಲಿಂದ ಸಂಜೆ 5.50ಕ್ಕೆ ಹೊರಟು ಸಂಜೆ 5.55ಕ್ಕೆ ವಾಯುನೆಲೆಗೆ ಬಂದು, ಅಲ್ಲಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ಪಯಣ ಬೆಳೆಸುವರು. ಸಂಜೆ ವಿಮಾನ ಹತ್ತುವುದಕ್ಕೂ ಮುನ್ನ ಸ್ಥಳೀಯ ಮುಖಂಡರೊಂದಿಗೆ ಕೆಲ ನಿಮಿಷ ಚರ್ಚಿಸುವರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here