Home Uncategorized ಬೆಂಗಳೂರಿನಲ್ಲಿ ಇನ್ನೂ 50 ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸರ್ಕಾರ ನಿರ್ಧಾರ

ಬೆಂಗಳೂರಿನಲ್ಲಿ ಇನ್ನೂ 50 ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸರ್ಕಾರ ನಿರ್ಧಾರ

22
0

ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲಿ 50 ಇಂದಿರಾ ಕ್ಯಾಂಟೀನ್ ಗಳನ್ನು ಹೊಸದಾಗಿ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲಿ 50 ಇಂದಿರಾ ಕ್ಯಾಂಟೀನ್ ಗಳನ್ನು ಹೊಸದಾಗಿ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇಂದಿರಾ ಕ್ಯಾಂಟೀನ್ ಸಂಖ್ಯೆಯನ್ನು 198 ರಿಂದ 250ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಮೂಲಕ ಬಡವರ ಇಂದಿರಾ ಕ್ಯಾಂಟೀನ್ ಜನರ ಹೊಟ್ಟೆ ತುಂಬಿಸಲಿದೆ. ಗುಣಮಟ್ಟದ ಆಹಾರ ನೀಡಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ ನೇಮಕದ ಅಗತ್ಯವಿದೆ: ರಾಮಲಿಂಗಾರೆಡ್ಡಿ

ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 50 ಇಂದಿರಾ ಕ್ಯಾಂಟೀನ್ ತಲೆ ಎತ್ತಲಿದ್ದು, ವಿವಿಧ ಬಗೆಯ ತಿಂಡಿ ಊಟ ಸಿಗಲಿದೆ. ಜೂನ್ 29 ರಿಂದ ಕ್ಯಾಂಟೀನ್ ಆರಂಭವಾಗಲಿದ್ದು, ತಿಂಡಿಗೆ 10 ರೂ, ಊಟಕ್ಕೆ 20 ರೂ ಬೆಲೆ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಲೆ ಏರಿಸಿ ಶುಚಿಕರ ತಿಂಡಿ ಊಟ ನೀಡಲು ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ. 

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿಗೆ 2 ಇಡ್ಲಿ 1 ವಡೆ, ಉಪ್ಪಿಟ್ಟು, ಕೇಸರಿಬಾತ್, ಬಿಸಿಬೇಳೆ ಬಾತ್, ಪೂಳಿಯೋಗೆರೆ, ಚಿತ್ರಾನ್ನ , ವಾಂಗಿಬಾತ್, , ರೈಸ್ ಬಾತ್ ಟೋಮ್ಯಾಟೋ ಬಾತ್ ಸಿಗಲಿದೆ. ಮಧ್ಯಾಹ್ನ ಊಟಕ್ಕೆ ಒಂದು ಚಪಾತಿ, ಮುದ್ದೆ, ಒಂದು ವೆಜ್ ಪಲ್ಯಾ, ಕಪ್ ವೈಟ್ ರೈಸ್, ಸಾಂಬಾರ್ ಹಾಗೂ ರಸಂ, ವೆಜ್ ಪಲ್ಯಾ ಸಿಗಲಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ಬಿಬಿಎಂಪಿ ಮುಂದು: ಉಪಹಾರ ಮೆನು ಸಿದ್ಧಪಡಿಸಿದ ಅಧಿಕಾರಿಗಳು!

ಇನ್ನು ವಾರದಲ್ಲಿ ಮೂರು ದಿನ ಮಧ್ಯಾಹ್ನ ಸಿಹಿ ತಿಂಡಿ, ಹೋಳಿಗೆ, ಅಕ್ಕಿಪಾಯಸ, ಕೇಸರಿ ಬಾತ್ ಹಾಗೂ ರಾತ್ರಿ ಊಟಕ್ಕೆ ರೈಸ್ ಬಾತ್, ಅನ್ನ ಸಾಂಬಾರ್ ಇರಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
 

LEAVE A REPLY

Please enter your comment!
Please enter your name here