ನಗರದ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ವೈದ್ಯಕೀಯ ಮತ್ತು ಭಾವನಾತ್ಮಕವಾಗಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಬೆಂಗಳೂರು: ನಗರದ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ವೈದ್ಯಕೀಯ ಮತ್ತು ಭಾವನಾತ್ಮಕವಾಗಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ರೋಗಿಯ ಕುಟುಂಬವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ವಿಡಿಯೋ ಫೋಸ್ಟ್ ಮಾಡಿದ ಬಳಿಕ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಅವರು ಗುಡ್ ವಿಲ್ ಚಿಲ್ಡ್ರನ್ ಕ್ಸಿನಿಕ್ ಕಳೆದೊಂದು ವರ್ಷದಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ತನ್ನ ಅನಿಸಿಕೆ ಹಂಚಿಕೊಂಡ ವೈದ್ಯರು, ಕಳೆದ 10 ವರ್ಷಗಳಿಂದ ಶಿಶುವೈದ್ಯನಾಗಿ ಅಭ್ಯಾಸ ಮಾಡುತ್ತಿದ್ದೇನೆ ಮತ್ತು ನನ್ನ ಶೈಲಿಯು ಒಂದೇ ಆಗಿರುತ್ತದೆ. ರೋಗಿಗಳನ್ನು ನಗಿಸಲು ಮತ್ತು ಅವರಿಗೆ ಆರಾಮದಾಯಕವಾಗಲು ಪ್ರಯತ್ನಿಸುತ್ತೇನೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ರೋಗಿಯ ತಾಯಿಯೊಬ್ಬರು ವೀಡಿಯೊ ರೆಕಾರ್ಡ್ ಮಾಡಿಕೊಳ್ಳಲು ಮನವಿ ಮಾಡಿದರು. ತನ್ನ ಮಗಳಿಗೆ ಟೇಪ್‌ನಲ್ಲಿ ವ್ಯಾಕ್ಸಿನೇಷನ್ ಮಾಡಬೇಕೆಂದು ಬಯಸಿ ಆಕೆ ವಿಡಿಯೋ ಮಾಡಿದ್ದಳು. ಇದು ಸುಮಾರು 10 ದಿನಗಳಲ್ಲಿ ಸುಮಾರು ಮೂರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನಂತರ ಅನೇಕ ಜನರಿಂದ ಹೆಚ್ಚಿನ ಮನವಿಗಳು ಬರಲು ಶುರುವಾಯಿತು. ಇದು ದೊಡ್ಡ ವ್ಯವಹಾರ ಎಂದು ನಾನು ಎಂದೂ ತಿಳಿದಿರಲಿಲ್ಲ ಎಂದರು.
ಅಂತಿಮವಾಗಿ, ನಾನು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದೆ. ಉಳಿದೆದೆಲ್ಲಾ ಇತಿಹಾಸ ಎಂದು ಅವರು ಹೇಳುತ್ತಾರೆ. ಪ್ರಸ್ತುತ ಅವರು Instagram ನಲ್ಲಿ ಸುಮಾರು 896k ಅನುಯಾಯಿಗಳು ಮತ್ತು ಯೂಟ್ಯೂಬ್‌ನಲ್ಲಿ 670k ಚಂದಾದಾರರನ್ನು ಹೊಂದಿದ್ದಾರೆ. ಡಾ.ಹುಸೇನ್ ಅವರಿಂದ ಮಕ್ಕಳಿಗೆ ಚಿಕಿತ್ಸೆಗಾಗಿ ದೇಶಾದ್ಯಂತ ಜನರು ಬರುತ್ತಿದ್ದಾರೆ. ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಿದೆ. ಇತ್ತೀಚೆಗೆ ಹರ್ಯಾಣದಿಂದ ರೋಗಿಯೊಬ್ಬರು ಬಂದಿದ್ದರು ಎಂದು ಅವರು ಮಾಹಿತಿ ನೀಡಿದರು.
ಖ್ಯಾತ ಮಕ್ಕಳ ತಜ್ಞ ಡಾ. ಸಯ್ಯದ್ ಮುಜಾಹಿದ್ ಹುಸೇನ್
ನಿರೀಕ್ಷೆಗಳು ತುಂಬಾ ಹೆಚ್ಚಿವೆ. ನಾನು ದೇಶದ ಅತ್ಯುತ್ತಮ ವೈದ್ಯ ಎಂದು ಹೇಳಿಕೊಳ್ಳುವುದಿಲ್ಲ.ನನಗೆ ಗೊತ್ತಿಲ್ಲ ಎಂದರೆ ತಕ್ಷಣ ರೋಗಿಯನ್ನು ಉತ್ತಮ-ಸೂಕ್ತ ವೈದ್ಯರಿಗೆ ಶಿಫಾರಸು ಮಾಡುತ್ತೇನೆ. ಕೆಲವು ಕುಟುಂಬಗಳು ತಮ್ಮ ಮನೆಗಳ ಬಳಿ ಉತ್ತಮ ಮಕ್ಕಳ ವೈದ್ಯರ ಬಗ್ಗೆ ತಿಳಿದಿದ್ದರೂ ಸಹ, ನನ್ನನ್ನು ಭೇಟಿ ಮಾಡಲು ಮತ್ತು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ಬರುತ್ತಾರೆ. ಅದು ನನ್ನ ಮೇಲಿರುವ ವಿಶ್ವಾಸ ಎಂದು ಹೇಳಿ ಅವರನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಆರಂಭಿಕ ದಿನಗಳಲ್ಲಿ ಜನರ ಏರಿಕೆಯಿಂದ ಸ್ವಲ್ಪ ಆಶ್ಚರ್ಯಚಕಿತನಾಗಿದ್ದೆ. ನಂತರ ಏನಾಗುತ್ತಿದೆ ಎಂಬ ಕಲ್ಪನೆಯನ್ನು ಪಡೆಯಲು ನಾನು ಸಾಮಾಜಿಕ ಮಾಧ್ಯಮವನ್ನು ಸ್ವಲ್ಪ ಅಧ್ಯಯನ ಮಾಡಿದೆ. ಪ್ರಾಥಮಿಕವಾಗಿ, ನನ್ನ ಕೆಲಸ ಮತ್ತು ನಾನು ಮಕ್ಕಳೊಂದಿಗೆ ವ್ಯವಹರಿಸುವ ರೀತಿಯಲ್ಲಿ ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ ಎಂದು ಅರಿತುಕೊಂಡೆ . ಅದು ಯಾವಾಗಲೂ ನನ್ನ ಪ್ರಾಥಮಿಕ ಗಮನವಾಗಿರುತ್ತದೆ ದರಿಂದ ಎಂದಿಗೂ ವಿಮುಖರಾಗಲು ಸಾಧ್ಯವಿಲ್ಲ ಎಂದು ಡಾ ಹುಸೇನ್ ವಿವರಿಸಿದರು.