ವಾಣಿ ವಿಲಾಸ ಆಸ್ಪತ್ರೆಯಿಂದ ಶನಿವಾರ ಮುಂಜಾನೆ ಎಂಟು ದಿನದ ಗಂಡು ಮಗುವನ್ನು ಅಪಹರಿಸಲಾಗಿದೆ. ನವಜಾತ ಶಿಶು ಅಪಹರಿಸಿದ ಮಹಿಳೆಯ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಿಂದ ಶನಿವಾರ ಮುಂಜಾನೆ ಎಂಟು ದಿನದ ಗಂಡು ಮಗುವನ್ನು ಅಪಹರಿಸಲಾಗಿದೆ. ನವಜಾತ ಶಿಶು ಅಪಹರಿಸಿದ ಮಹಿಳೆಯ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.ಈ ಸಂಬಂಧ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಡೇನೂರು ಗ್ರಾಮದ ನಿವಾಸಿ ಎಂ.ಪಿ ಪ್ರಸನ್ನ ಎಂಬುವರು ವಿವಿ ಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.
ಏಪ್ರಿಲ್ 6 ರಂದು ತಮ್ಮ ಪತ್ನಿ ಸುಮಾ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಮರುದಿನವೇ ಮರುದಿನವೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದ್ದರೂ ತಾಯಿಯಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವುದರಿಂದ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ದೂರುದಾರರು ತಮ್ಮ ಊರಿಗೆ ಹಿಂದಿರುಗಿದರೆ, ಅವರ ಸಂಬಂಧಿ ನಾಗಮ್ಮ ಅವರು ತಾಯಿ ಮತ್ತು ನವಜಾತ ಶಿಶುವಿದ್ದ ವಾರ್ಡ್ ನಂಬರ್ 1ರಲ್ಲಿ ಜೊತೆಯಲ್ಲಿದ್ದರು. ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ತಾಯಿ ಮಗುವಿಗೆ ಹಾಲುಣಿಸಿ ನಿದ್ದೆಗೆ ಜಾರಿದ್ದು, ಸುಮಾರು 30 ನಿಮಿಷಗಳ ನಂತರ ಎಚ್ಚರಗೊಂಡಾಗ ಮಗು ಕಾಣೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಕೆ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ಮಗು ಸುಳಿವು ಸಿಗಲಿಲ್ಲ. ಮಗುವನ್ನು ಕಿಡ್ನಾಪ್ ಮಾಡುವಾಗ ಸಂಬಂಧಿ ನಾಗಮ್ಮ ಕೂಡ ಮಲಗಿದ್ದರು. ನಂತರ ಸುಮಾ ತನ್ನ ಪತಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸ್ ದೂರು ದಾಖಲಿಸಲು ನಗರಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸೀರೆಯುಟ್ಟಿದ್ದ ಮಹಿಳೆಯೊಬ್ಬರು ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ನವಜಾತ ಶಿಶುವನ್ನು ಅಪಹರಿಸಿಕೊಂಡು ಹೋಗಿರುವುದು ಪತ್ತೆಯಾಗಿದೆ. ಶಿಶುವನ್ನು ರಕ್ಷಿಸಲು ಮತ್ತು ಅಪರಾಧಿಯನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.