Home Uncategorized ಬೆಂಗಳೂರು | ಉಗ್ರ ಸಂಘಟನೆ ಜೊತೆ ನಂಟು: ಇಬ್ಬರು ಆರೋಪಿಗಳಿಗೆ ಏಳು ವರ್ಷ ಜೈಲು, ದಂಡ

ಬೆಂಗಳೂರು | ಉಗ್ರ ಸಂಘಟನೆ ಜೊತೆ ನಂಟು: ಇಬ್ಬರು ಆರೋಪಿಗಳಿಗೆ ಏಳು ವರ್ಷ ಜೈಲು, ದಂಡ

22
0

ಬೆಂಗಳೂರು, ಡಿ.28: ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಬಂಧಿತ ಇಬ್ಬರು ಆರೋಪಿಗಳಿಗೆ ಬೆಂಗಳೂರಿನ ಎನ್.ಐ.ಎ. ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ ಆದೇಶಿಸಿದೆ.

ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ (24) ಮತ್ತು ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ಅಲೀಮ್ ಮೊಂಡಲ್(23) ಶಿಕ್ಷೆಗೊಳಗಾದ ಆರೋಪಿಗಳು. ಅಖ್ತರ್ ಹುಸೇನ್ ಲಷ್ಕರ್ ಗೆ 41 ಸಾವಿರ ರೂ. ಮತ್ತು ಅಬ್ದುಲ್ ಅಲೀಮ್ ಮೊಂಡಲ್ ಗೆ 51 ಸಾವಿರ ರೂ. ದಂಡ ವಿಧಿಸಲಾಗಿದೆ.

ಬಂಧಿತರು ವಿದೇಶದಲ್ಲಿರುವ ನಿಷೇಧಿತ ಅಲ್ ಖೈದಾ ಸಂಘಟನೆಯ ಸದಸ್ಯರ ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದ ಆರೋಪ ಎದುರಿಸುತ್ತಿದ್ದರು. ಇವರನ್ನು ಕಳೆದ ವರ್ಷದ ಜುಲೈನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

LEAVE A REPLY

Please enter your comment!
Please enter your name here