ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಭಾರಿ ಹೊಡೆತ ಬಿದ್ದಿದ್ದ ಬೆಂಗಳೂರಿನಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ನಾಗರಿಕ ಆಧಾರಿತ ಉಪಕ್ರಮವೆಂದು ಹೆಸರಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಕೋಟಿ ವೃಕ್ಷ ಸೈನ್ಯ ಎಂಬ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಭಾರಿ ಹೊಡೆತ ಬಿದ್ದಿದ್ದ ಬೆಂಗಳೂರಿನಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ನಾಗರಿಕ ಆಧಾರಿತ ಉಪಕ್ರಮವೆಂದು ಹೆಸರಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಕೋಟಿ ವೃಕ್ಷ ಸೈನ್ಯ ಎಂಬ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್ ಜೈನ್ ಅವರು ಸಾಂಕೇತಿಕವಾಗಿ ಸಸಿ ನೆಟ್ಟು ಯೋಜನೆಗೆ ಚಾಲನೆ ನೀಡಿದರು. ಬೇರೆ ನಗರಗಳಿಗೆ ಹೋಲಿಸಿದರೆ, ಬೆಂಗಳೂರು ಹೆಚ್ಚು ಮರ ನೆಡುವ ಚಟುವಟಿಕೆಗಳನ್ನು ಕಾಣುತ್ತದೆ. ಅಭಿವೃದ್ಧಿ ಕಾರ್ಯಗಳಿಗಾಗಿ ನಾವು ಮರಗಳನ್ನು ಕಳೆದುಕೊಂಡಂತೆ, ನಾವು ಈಗ ಮಾಡುತ್ತಿರುವುದಕ್ಕಿಂತ 10 ಪಟ್ಟು ಹೆಚ್ಚು ಮರಗಳನ್ನು ನೆಡಬೇಕು ಎಂದು ತಿಳಿಸಿದರು.
ಎನ್‌ಜಿಒ ಪ್ರಕಾರ, ಈ ಯೋಜನೆಯು ಬೆಂಗಳೂರಿನ ಹಸಿರನ್ನು ಉಳಿಸಿಕೊಳ್ಳುವ ಮತ್ತು ಸ್ಥಳೀಯ ಜಾತಿಯ ಸಸ್ಯಗಳನ್ನು ನೆಡುವ ಗುರಿಯನ್ನು ಹೊಂದಿದೆ.
ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸರೀನಾ ಸಿಕ್ಕಲಿಗಾರ್ ಮಾತನಾಡಿ, ಬಿಬಿಎಂಪಿಗೆ ಪ್ರತಿದಿನ ಸರಾಸರಿ 150-200 ವಿವಿಧ ಕಾರಣಗಳಿಗಾಗಿ ಮರಗಳನ್ನು ಕಡಿಯಲು ಅರ್ಜಿಗಳು ಬರುತ್ತವೆ. ಪ್ರತಿಯೊಬ್ಬ ನಾಗರಿಕರು ಮರಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ನಾವು ಅವುಗಳನ್ನು ಮೂರು ವರ್ಷ ನೋಡಿಕೊಂಡರೆ, ಅವು ನೂರು ವರ್ಷಗಳವರೆಗೆ ನಮ್ಮನ್ನು ನೋಡಿಕೊಳ್ಳುತ್ತವೆ ಎಂದು ಹೇಳಿದರು.
ಕೆವಿಎಸ್ ಸಂಸ್ಥಾಪಕಿ ಸುರಭಿ ತೋಮರ್ ಮಾತನಾಡಿ, ಈ ಯೋಜನೆಯು ಕೇವಲ ಸಸಿಗಳನ್ನು ನೆಡುವುದಲ್ಲದೆ ನೀರು ಹಾಕುವುದು ಮತ್ತು ಬೇಲಿ ಹಾಕುವುದನ್ನು ಒಳಗೊಂಡಿರುತ್ತದೆ ಎಂದರು.
ಇಲ್ಲಿಯವರೆಗೆ ಸುಮಾರು 75,000 ಸಸಿಗಳನ್ನು ನೆಟ್ಟಿರುವ ಕೆವಿಎಸ್‌ನ ಸ್ವಯಂಸೇವಕರು ಮತ್ತು ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.