Home Uncategorized ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ!

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ!

35
0

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ. ಮೃತನನ್ನು ರವಿ ಅಲಿಯಾಸ್ ಮತ್ತಿರವಿ (42) ಎಂದು ಗುರುತಿಸಲಾಗಿದ್ದು ಇವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ. ಮೃತನನ್ನು ರವಿ ಅಲಿಯಾಸ್ ಮತ್ತಿರವಿ (42) ಎಂದು ಗುರುತಿಸಲಾಗಿದ್ದು ಇವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು.

ಲಗ್ಗೆರೆ ಬಳಿಕ ಚೌಡೇಶ್ವರಿನಗರದ ಹಳ್ಳಿರುಚಿ ಹೋಟೆಲ್ ಬಳಿ ಕೊಲೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿರವಿ(42) ಎಂಬುವವರನ್ನು ಬೈಕ್​ಗಳಲ್ಲಿ ಬಂದ ಐದಾರು ದುಷ್ಕರ್ಮಿಗಳು ಹತ್ಯೆ ಮಾಡಿ ಎಸ್ಕೇಪ್ ಅಗಿದ್ದಾರೆ.

ಸಿಎಂಹೆಚ್ ಬಾರ್ ಬಳಿಯಿಂದ ರವಿಯನ್ನ ಅಟ್ಟಾಡಿಸಿದ ಕಿರಾತಕರು ಹಲ್ಲೆ ನಡೆಸಿದ್ದಾರೆ. ನಂತರ ಅವರು ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿದ್ದು ಕೊನೆಗೆ ತಲೆಯ ಮೇಲೆ ಸೈಜ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

ರವಿ ಕೊಲೆ ಮಾಡಿದ ಹಂತಕರು ಕೊಲೆಗೂ ಮುನ್ನ ಏರಿಯಾದಲ್ಲಿ ಹಾಕಿದ್ದ ರವಿಕುಮಾರ್ ಅವರ ಫ್ಲೆಕ್ಸ್ ಹರಿದು ಹಾಕಿದ್ದಾರೆ. ಬಳಿಕ ರವಿ ಮನೆ ಮುಂದೆ ಬಂದು ಕಾದು ಕುಳಿತಿದ್ದರು. ಮೇ 24ರಂದು ಕಾಂಗ್ರೆಸ್ ಮುಖಂಡ ಹಾಗೂ ಫೈನಾನ್ಷಿಯರ್ ಕೃಷ್ಣ ಮೂರ್ತಿ ಹುಟ್ಟುಹಬ್ಬ ಇತ್ತು. ಈ ಹಿನ್ನೆಲೆ ಕಾರ್ಯಕ್ರಮಕ್ಕೆ ನೂರಾರು ಕಾರ್ಯಕರ್ತರು ಆಗಮಿಸಿದ್ದರು.

ಇದೇ ಹುಟ್ಟುಹಬ್ಬಕ್ಕೆ ಹಾಜರಾಗಲು ರವಿ ಖುಷಿ ಖುಷಿಯಿಂದ ಮನೆಯಿಂದ ಆಚೆ ಬಂದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಓಡಿದ ರವಿಯನ್ನ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ.  ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಹಂಕತರ ಪತ್ತೆಗೆ ಬಲೆ ಬೀಸಲಾಗಿದೆ.

LEAVE A REPLY

Please enter your comment!
Please enter your name here