Home Uncategorized ಬೆಂಗಳೂರು: ಕಾಫಿ ಬೋರ್ಡ್'ನಲ್ಲಿರುವ ಮಿಟ್ಟಿ ಕೆಫೆಗೆ ಜರ್ಮನ್ ಚಾನ್ಸೆಲರ್ ಭೇಟಿ, ಸಿಬ್ಬಂದಿಗಳೊಂದಿಗೆ ಕಾಫಿ ಸವಿದ ಓಲಾಫ್...

ಬೆಂಗಳೂರು: ಕಾಫಿ ಬೋರ್ಡ್'ನಲ್ಲಿರುವ ಮಿಟ್ಟಿ ಕೆಫೆಗೆ ಜರ್ಮನ್ ಚಾನ್ಸೆಲರ್ ಭೇಟಿ, ಸಿಬ್ಬಂದಿಗಳೊಂದಿಗೆ ಕಾಫಿ ಸವಿದ ಓಲಾಫ್ ಸ್ಕೋಲ್ಜ್

25
0

ಡಾ ಅಂಬೇಡ್ಕರ್ ರಸ್ತೆಯಲ್ಲಿರುವ ಇಂಡಿಯಾ ಕಾಫಿ ಬೋರ್ಡ್’ನಲ್ಲಿರುವ ಮಿಟ್ಟಿಕೆಫೆಗೆ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭಾನುವಾರ ಭೇಟಿ ನೀಡಿದ್ದು, ಸಿಬ್ಬಂದಿಗಳ ಜೊತೆಗೂಡಿ ಕಾಫಿ ಸವಿದರು. ಬೆಂಗಳೂರು: ಡಾ ಅಂಬೇಡ್ಕರ್ ರಸ್ತೆಯಲ್ಲಿರುವ ಇಂಡಿಯಾ ಕಾಫಿ ಬೋರ್ಡ್’ನಲ್ಲಿರುವ ಮಿಟ್ಟಿಕೆಫೆಗೆ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭಾನುವಾರ ಭೇಟಿ ನೀಡಿದ್ದು, ಸಿಬ್ಬಂದಿಗಳ ಜೊತೆಗೂಡಿ ಕಾಫಿ ಸವಿದರು.

ವಿಶೇಷಚೇತನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆ ಈ ಮಿಟ್ಟಿ ಕೆಫೆ ಆಗಿದ್ದು, ಕಡಿಮೆ-ಆದಾಯದ ಕುಟುಂಬಗಳಿಂದ ಬಂದಿರುವ, ದೈಹಿಕ, ಬೌದ್ಧಿಕ ಮತ್ತು ಮನೋವೈದ್ಯಕೀಯ ಅಸಾಮರ್ಥ್ಯಗಳೊಂದಿಗೆ ಹೋರಾಡುವ ವಿಶೇಷ ಸಾಮರ್ಥ್ಯವುಳ್ಳ ಜನರಿಂದ ಈ ಕೆಫೆಯನ್ನು ನಡೆಸಲಾಗುತ್ತದೆ. ಮಿಟ್ಟಿ ಸೋಶಿಯಲ್ ಇನಿಶಿಯೇಟಿವ್ಸ್ ಫೌಂಡೇಶನ್ ದೇಶದಾದ್ಯಂತ ಹಲವು ಮಿಟ್ಟಿ ಕೆಫೆಗಳನ್ನು ನಡೆಸುತ್ತಿದೆ.

ಇದರಂತೆ ಇಂಡಿಯಾ ಕಾಫಿ ಬೋರ್ಡ್ ನಲ್ಲಿಯೂ ಮಿಟ್ಟಿ ಕೆಫೆಯಿದ್ದು, ಈ ಕೆಫೆಗೆ ನಿನ್ನೆ ಜರ್ಮನ್ ಚಾನ್ಸೆಲರ್ ಭೇಟಿ ನೀಡಿದರು.

ಸಂಜೆ 4.30ಕ್ಕೆ ಕೆಫೆಗೆ ಭೇಟಿ ನೀಡಿದ ಜರ್ಮನ್ ಚಾನ್ಸೆಲರ್, 5 ಗಂಟೆಯವರೆಗೆ ಕೆಫೆಯಲ್ಲಿ ಕಾಫಿ ಸವಿದು, ಸಿಬ್ಬಂದಿಗಳೊಂದಿಗೆ ಕಾಲ ಕಳೆದರು.

ಕರ್ತವ್ಯ ನಿಮಿತ್ತ ಕೆಫೆಯಲ್ಲಿರುವ ನಾಲ್ವರು ಬೆಂಗಳೂರಿಗರು ಶೀಘ್ರದಲ್ಲಿಯೇ ಜರ್ಮನಿಗೆ ಸ್ಥಳಾಂತರಗೊಳ್ಳಲಿದ್ದಾರೆಂದು ಮಿಟ್ಟಿ ಕೆಫೆಯ ಕ್ರಿಯೇಟಿವ್ಸ್ ಮತ್ತು ಕಾಫಿ ಆಪರೇಷನ್ ಮುಖ್ಯಸ್ಥ ವಿಲ್ಫ್ರೆಡ್ ಲ್ಯಾನ್ಸೆಲಾಟ್ ಅವರು ಹೇಳಿದ್ದಾರೆ.

ಕೆಫೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಪುರುಷ ಹಾಗೂ ನಾಲ್ವರು ಮಹಿಳಾ ಸಿಬ್ಬಂದಿಗಳು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಮಾತುಕತೆ ನಡೆಸುವ, ತಮ್ಮ ಸಂವಾದ ನಡೆಸುವ ಅವಕಾಶ ಪಡೆದುಕೊಂಡರು.

ತಮ್ಮ ಅನುಭವ ಹಂಚಿಕೊಳ್ಳುವಂತೆ ಜರ್ಮನ್ ಚಾನ್ಸೆಲರ್’ಗಳು ಸಿಬ್ಬಂದಿಗಳನ್ನು ಕೇಳಿಕೊಂಡರು. ಅಂಗವೈಕಲ್ಯವು ನಿಮ್ಮ ಗುರಿ ತಲುಪುವುಡನ್ನು ತಡೆಯಬಾರದು ಎಂದು ಚಾನ್ಸೆಲರ್ ಸಲಹೆ ನೀಡಿದರು.

ನಗರದ ಅತ್ಯುತ್ತಮ ಕೆಫೆಗಳ ಪಟ್ಟಿಯನ್ನು ಚಾನ್ಸೆಲರ್ ಗಳ ಮುಂದಿಡಲಾಗಿತ್ತು. ಆದರೆ, ಅವರು ಮಿಟ್ಟಿ ಕೆಫೆಯನ್ನು ಆಯ್ಕೆ ಮಾಡಿದರು. ಈ ಕೆಫೆ ವಿಶ್ವಸಂಸ್ಥೆಯಿಂದ ಪ್ರಶಸ್ತಿಯನ್ನೂ ಕೂಡ ಪಡೆದುಕೊಂಡಿದೆ. ಮಿಟ್ಟಿಕೆಫೆಯೊಂದಿಗೆ ಚರ್ಚೆಗಳನ್ನು ನಡೆಸುವುದಾಗಿ ಚಾನ್ಸೆಲರ್ ಭರಸವೆ ನೀಡಿದ್ದಾರೆ. ಜರ್ಮನಿ ರಾಷ್ಟ್ರದೊಂಡಿದೆ ನಮ್ಮ ಪಾಲುದಾರಿಕೆ ಮಾಡಿಕೊಳ್ಳುವ ಸಾಮರ್ಥ್ಯ ನಮಗಿದೆ ಎಂದು ಲ್ಯಾನ್ಸೆಲಾಟ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here