ಬೆಂಗಳೂರು: ವಿಚ್ಛೇದನ ಪಡೆಯಲು ಮುಂದಾಗಿದ್ದ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು ಪತಿ ಆಕೆಯ ಫೋಟೊ ಮತ್ತು ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿ ‘ಕಾಲ್ ಗರ್ಲ್ ಬೇಕೇ’? ಕರೆ ಮಾಡಿ ಎಂದು ಪೋಸ್ಟ್ ಹಾಕಿದ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.
ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಪತ್ಯ ಕಲಹವೇ ಈ ಘಟನೆಗೆ ಮುಖ್ಯ ಕಾರಣ ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸತ್ಯನಾರಾಯಣ ರೆಡ್ಡಿ ಎಂಬ ವ್ಯಕ್ತಿ ಕಲಾಶಶಿ ಎಂಬ ಫೇಸ್‍ಬುಕ್ ಪೇಜ್‍ನ್ನು ತೆರೆದು ಅದರಲ್ಲಿ ವಿಚ್ಛೇದನ ನೀಡಲು ಮುಂದಾಗಿರುವ ಪತ್ನಿ, ಆಕೆಯ ಸಹೋದರಿ ಹಾಗೂ ಸಹೋದರನ ನಂಬರ್ ಹಾಕಿದ್ದಾನೆ ಎಂದು ಎಫ್‍ಐಆರ್ ನಲ್ಲಿ ದಾಖಲಾಗಿದೆ.