ಒನ್ ವೇ ನಲ್ಲಿ ಬಂದು ನಿಂತಿದ್ದ ಬೊಲೆರೋಗೆ ಡಿಕ್ಕಿ ಹೊಡೆದು, ಅದನ್ನು ಪ್ರಶ್ನಿಸಲು ಸ್ಕೂಟರ್ ಹಿಡಿದ ವೃದ್ಧ ಚಾಲಕನನ್ನು ಕಿ.ಮೀ ಗಟ್ಟಲೆ ಎಳೆದೊಯ್ದು ಅಮಾನೀವಯವಾಗಿ ನಡೆದುಕೊಂಡ ಸ್ಕೂಟರ್ ಸವಾರ ಸೊಹೇಲ್ ವಿರುದ್ಧ ಪೊಲೀಸರು… ಬೆಂಗಳೂರು: ಒನ್ ವೇ ನಲ್ಲಿ ಬಂದು ನಿಂತಿದ್ದ ಬೊಲೆರೋಗೆ ಡಿಕ್ಕಿ ಹೊಡೆದು, ಅದನ್ನು ಪ್ರಶ್ನಿಸಲು ಸ್ಕೂಟರ್ ಹಿಡಿದ ವೃದ್ಧ ಚಾಲಕನನ್ನು ಕಿ.ಮೀ ಗಟ್ಟಲೆ ಎಳೆದೊಯ್ದು ಅಮಾನೀವಯವಾಗಿ ನಡೆದುಕೊಂಡ ಸ್ಕೂಟರ್ ಸವಾರ ಸೊಹೇಲ್ ವಿರುದ್ಧ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ.
ಅಪಘಾತ ಮಾಡಿ, ವೃದ್ಧನನ್ನು ಎಳೆದೊಯ್ದ ಸ್ಕೂಟರ್ ಸವಾರ ಸೊಹೇಲ್ ವಿರುದ್ಧ ವಿಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮತ್ತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ: ಒನ್ ವೇ ನಲ್ಲಿ ಬಂದು ಬೊಲೆರೋಗೆ ಢಿಕ್ಕಿ: ಬೈಕ್ ಸವಾರನ ಪ್ರಶ್ನಿಸಿದ ವೃದ್ದ ಚಾಲಕನ ಕಿ.ಮೀ ಗಟ್ಟಲೆ ಎಳೆದೊಯ್ದ ದುರುಳ!
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಈ ಕೃತ್ಯ ನಡೆದಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದ ಬೊಲೆರೋ ಚಾಲಕ 71 ವರ್ಷದ ಮುತ್ತಪ್ಪ ಅವರ ವಾಹನಕ್ಕೆ ಹೋಂಡಾ ಆಕ್ಟಿವಾದಲ್ಲಿ ಬಂದ ದ್ವಿಚಕ್ರ ಸವಾರ ಸೊಹೇಲ್ ಡಿಕ್ಕಿ ಹೊಡೆಸಿದ್ದಾನೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸೊಹೇಲ್ ಬೈಕ್ ಜತೆ ಪರಾರಿಯಾಗಲು ಯತ್ನಿಸಿದ್ದು, ಮುತ್ತಪ್ಪ ಆತನ ಗಾಡಿ ಹಿಡಿದುಕೊಂಡಿದ್ದಾರೆ. ಅದನ್ನು ನೋಡಿಯೂ ಕೂಡ ಆತ ಏಕಾಏಕಿ ಗಾಡಿ ಚಲಾಯಿಸಿಕೊಂಡು ಹೋಗಿದ್ದಾನೆ.