ಜೂನ್ 14 ರಂದು ನಗರದ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ 25 ವರ್ಷದ ಮಹಿಳಾ ಸೆಕ್ಯುರಿಟಿ ಗಾರ್ಡ್ ಗೆ ಈಜುಕೊಳದ ಕೊಳಕು ನೀರನ್ನು ಕುಡಿಯಲು ಒತ್ತಾಯಿಸಿದ ಅಮಾನವೀಯ ಘಟನೆ ನಡೆದಿದೆ. ಬೆಂಗಳೂರು: ಜೂನ್ 14 ರಂದು ನಗರದ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ 25 ವರ್ಷದ ಮಹಿಳಾ ಸೆಕ್ಯುರಿಟಿ ಗಾರ್ಡ್ ಗೆ ಈಜುಕೊಳದ ಕೊಳಕು ನೀರನ್ನು ಕುಡಿಯಲು ಒತ್ತಾಯಿಸಿದ ಅಮಾನವೀಯ ಘಟನೆ ನಡೆದಿದೆ.
ಕೆಲಸದ ನಿಮಿತ್ತ ಬೊಮ್ಮನಹಳ್ಳಿಯ ದೇವರಚಿಕ್ಕನಹಳ್ಳಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕಳುಹಿಸಲಾಗಿತ್ತು. ಆಕೆಗೆ ಈಜುಕೊಳ ಪ್ರದೇಶದ ಉಸ್ತುವಾರಿ ವಹಿಸಲಾಯಿತು. ಕೊಳದ ಬಳಕೆಗೆ ಬಂದಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಯೊಬ್ಬರು ಗಲೀಜು ನೀರು ನೋಡಿ ಕಿರುಚಾಡಿದ್ದಾರೆ. ತಾನು ಸೆಕ್ಯುರಿಟಿ ಡ್ಯೂಟಿಯಲ್ಲಿದ್ದೇನೆ ಮತ್ತು ಪೂಲ್ ನಿರ್ವಹಣೆಗೆ ಯಾವುದೇ ಸಂಬಂಧವಿಲ್ಲ ಎಂದು ಆಕೆ ತಿಳಿಸಿದ್ದಾರೆ. ಈ ವೇಳೆ ಆತ ಸೆಕ್ಯುರಿಟಿ ಗಾರ್ಡ್ ಗೆ ಕೊಳದ ಕೊಳಕು ನೀರನ್ನು ಬಾಟಲಿಯಲ್ಲಿ ಹಿಡಿದು ಕುಡಿಯುವಂತೆ ಒತ್ತಾಯಿಸಿದ್ದಾನೆ.
ಅವಮಾನ ತಾಳಲಾರದೆ ಕೆಲಸ ತೊರೆದು ಮಹಿಳಾ ಸಿಬ್ಬಂದಿ ಆರೋಪಿ ಆಕಾಶ್ ಎಂಬುವವರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ. ಹೊಂಗಸಂದ್ರದ ನಿವಾಸಿಯಾಗಿರುವ ಸಂತ್ರಸ್ತೆ ತನ್ನ ಪೊಲೀಸ್ ದೂರಿನಲ್ಲಿ ಜೂನ್ 14 ರಂದು ಬೆಳಿಗ್ಗೆ 11.30 ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಅವರು ಈಜುಕೊಳದ ಗೇಟ್ ಅನ್ನು ಸಹ ಮುಚ್ಚಿ ಸ್ಥಳದಿಂದ ಹೊರಬರದಂತೆ ತಡೆದರು ಎಂದು ಅವರು ಆರೋಪಿಸಿದ್ದಾರೆ.
ಸಂತ್ರಸ್ತೆ ಭದ್ರತಾ ಮೇಲ್ವಿಚಾರಕ ಅನಿಕೇಶ್ ಚಕ್ರವರ್ತಿ ಮತ್ತು ನಿರ್ವಹಣಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅವರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಚಕ್ರವರ್ತಿ ಮತ್ತು ಮಲ್ಲಿಕಾರ್ಜುನ್, ಆಕಾಶ್‌ನ ಅಸಭ್ಯ ವರ್ತನೆ ಬಗ್ಗೆ ಪ್ರಶ್ನಿಸಿದಾಗ ಕೊಳಕು ನೀರು ಕುಡಿಯುವಂತೆ ಹೇಳಿದ್ದ ಎನ್ನಲಾಗಿದೆ.
ಆರೋಪಿಯು ವಿನಾಕಾರಣ ತನ್ನನ್ನು ಅವಮಾನಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಅವರು ಮ್ಯಾನೇಜರ್ ಗೆ ಈ ವಿಷಯ ತಿಳಿಸಿದ್ದಾರೆ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು, ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ಕಳುಹಿಸಲಾಗಿದೆ. ಈ ವಿಳಂಬದಿಂದಾಗಿ, ಘಟನೆಯ ನಂತರ ಆಕೆಗೆ ತಕ್ಷಣ ಪೊಲೀಸ್ ದೂರು ನೀಡಲು ಸಾಧ್ಯವಾಗಲಿಲ್ಲಎಂದು ಅಧಿಕಾರಿ ಹೇಳಿದರು. ಏತನ್ಮಧ್ಯೆ, ಫೆಸಿಲಿಟಿ ಮ್ಯಾನೇಜ್‌ಮೆಂಟ್ ಕಂಪನಿಯ ರಾಕೇಶ್, ಮಹಿಳಾ ಭದ್ರತಾ ಸಿಬ್ಬಂದಿ ತನ್ನ ಕೆಲಸವನ್ನು ತೊರೆದಿದ್ದಾರೆ ಮತ್ತು ಈಜುಕೊಳದ ಘಟನೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.