Home Uncategorized ಬೆಂಗಳೂರು: ಕೋರಮಂಗಲದಲ್ಲಿ 29 ವರ್ಷದ ಬೈಕ್ ಸವಾರನ ಮೇಲೆ ಹರಿದ ಟ್ರಕ್, ಸ್ಥಳದಲ್ಲೇ ಸಾವು

ಬೆಂಗಳೂರು: ಕೋರಮಂಗಲದಲ್ಲಿ 29 ವರ್ಷದ ಬೈಕ್ ಸವಾರನ ಮೇಲೆ ಹರಿದ ಟ್ರಕ್, ಸ್ಥಳದಲ್ಲೇ ಸಾವು

48
0

ಆಗ್ನೇಯ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರನ ಮೇಲೆ ಕ್ಯಾಂಟರ್ ಟ್ರಕ್ ಹರಿದಿದ್ದು, ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು 29 ವರ್ಷದ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರು ಕೋರಮಂಗಲದ 1ಎ ಬ್ಲಾಕ್‌ನ 8ನೇ ಮುಖ್ಯರಸ್ತೆಯಲ್ಲಿ ರಾತ್ರಿ 9.30ರ ವೇಳೆಗೆ ತೆರಳುತ್ತಿದ್ದಾಗ ಶಾಲೆಯ ಬಳಿ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬೆಂಗಳೂರು: ಆಗ್ನೇಯ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರನ ಮೇಲೆ ಕ್ಯಾಂಟರ್ ಟ್ರಕ್ ಹರಿದಿದ್ದು, ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರನ್ನು 29 ವರ್ಷದ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರು ಕೋರಮಂಗಲದ 1ಎ ಬ್ಲಾಕ್‌ನ 8ನೇ ಮುಖ್ಯರಸ್ತೆಯಲ್ಲಿ ರಾತ್ರಿ 9.30ರ ವೇಳೆಗೆ ತೆರಳುತ್ತಿದ್ದಾಗ ಶಾಲೆಯ ಬಳಿ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಕ್ಯಾಂಟರ್ ಹಿಂಬದಿಯ ಚಕ್ರಗಳು ಅವರ ಮೇಲೆ ಹರಿದಿದ್ದರಿಂದ ಅಶೋಕ್ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. 

ಕೋರಮಂಗಲದ ಕಾರ್ ಶೋ ರೂಂನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ್ ಅವರು ಬೊಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಆರು ತಿಂಗಳ ಮಗುವಿದೆ. 

ಕ್ಯಾಂಟರ್ ಚಾಲಕನನ್ನು ಆಡುಗೋಡಿ ಸಂಚಾರ ಪೊಲೀಸರು ಗುರುತಿಸಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here