Home Uncategorized ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಮಾರಾಮಾರಿ, ಓರ್ವನ ಹತ್ಯೆ

ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಮಾರಾಮಾರಿ, ಓರ್ವನ ಹತ್ಯೆ

22
0

ಗಣೇಶನ ವಿಸರ್ಜನೆ ಮಾಡಲು ಹೋದಾಗ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಓರ್ವ ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು: ಗಣೇಶನ ವಿಸರ್ಜನೆ ಮಾಡಲು ಹೋದಾಗ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಓರ್ವ ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಡುಗೋಡಿಯ ಶ್ರೀನಿವಾಸ್ ಹತ್ಯೆಯಾದ ಯುವಕ, ಈತನ ಕೊಲೆಯ ಮೂಲಕ ಎರಡು ಗುಂಪುಗಳ ಜಗಳ ಅಂತ್ಯವಾಗಿದೆ.

ಗಣಪತಿ ಬಿಡುವಾಗ ನೃತ್ಯ ಮಾಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿ ಲಾಂಗ್ ಮಚ್ಚುಗಳಿಂದ ಹೊಡೆದಾಟ ಮಾಡಿಕೊಂಡಿವೆ. ಆರೋಪಿಗಳಾದ ವಿನಯ್, ರಂಜಿತ್ ಮತ್ತು ಇತರ ಕೆಲವರು ಶ್ರೀನಿವಾಸ್ ಅವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ.

ಗಲಾಟೆಯಲ್ಲಿ ರಂಜಿತ್’ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ಗಲಾಟೆ ಬಿಡಿಸಲು ಬಂದ ಮೃತ ಶ್ರೀನಿವಾಸ್ ತಾಯಿಗೂ ಗ್ಯಾಂಗ್ ಚಾಕುವಿನಿಂದ ಇರಿಯಲಾಗಿದೆ. ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನಾ ಸಮಯದಲ್ಲಿ ನೃತ್ಯದ ವಿಚಾರವಾಗಿ ಗಲಾಟೆಯಾಗಿತ್ತು. ಶ್ರೀನಿವಾಸ್ ಕಡೆಯವರಿಗೆ ಇಲ್ಲಿ ನೀವು ನೃತ್ಯ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಇದೇ ಸಿಟ್ಟು ಇಟ್ಟುಕೊಂಡಿದ್ದ ಶ್ರೀನಿವಾಸ್ ಅವರು, ಭಾನುವಾರ ವಿನಯ್ ತಮ್ಮ ಮನೆ ಮುಂದೆ ಡ್ಯಾನ್ಸ್ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ವಿನಯ್ ಗುಂಪು ಈ ಗಣೇಶ ಬಲಿ ಕೇಳುತ್ತೆ ಎಂದು ಕೂಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಗಲಾಟೆಯಲ್ಲಿ ಲಾಂಗು ಮಚ್ಚು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಗುಂಪು ಗಲಾಟೆ ಮಾಡಬೇಕು ಎಂದು ರೆಡಿಯಾಗಿಯೇ ಬಂದಿತ್ತು. ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನೆ ಸಂಬಂಧ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ.

LEAVE A REPLY

Please enter your comment!
Please enter your name here