Home Uncategorized ‘ಬೆಂಗಳೂರು ಚಿನ್ನದ ಉತ್ಸವ’: ಅಕ್ಟೋಬರ್‌ 15 ರಿಂದ 45 ದಿನಗಳ ಕಾಲ: ಚಿನ್ನ ಗೆಲ್ಲುವ ಅವಕಾಶ!

‘ಬೆಂಗಳೂರು ಚಿನ್ನದ ಉತ್ಸವ’: ಅಕ್ಟೋಬರ್‌ 15 ರಿಂದ 45 ದಿನಗಳ ಕಾಲ: ಚಿನ್ನ ಗೆಲ್ಲುವ ಅವಕಾಶ!

38
0

ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್‌ ವತಿಯಿಂದ ಇದೇ ಬರುವ ಅಕ್ಟೋಬರ್‌ 15 ರಿಂದ 45 ದಿನಗಳ ಕಾಲ 2ನೇ ಆವೃತ್ತಿಯ ‘ಬೆಂಗಳೂರು ಚಿನ್ನದ ಉತ್ಸವ’ ಆಯೋಜಿಸಲಾಗಿದೆ.

ಚಿನ್ನದ ಕರಕುಶಲತೆ ಮತ್ತು ಉತ್ಪಾದನೆಯಲ್ಲಿ ಬೆಂಗಳೂರಿನ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಭರವಸೆಯೊಂದಿಗೆ ಈ ಬೆಂಗಳೂರು ಚಿನ್ನದ ಉತ್ಸವವು ಅಕ್ಟೋಬರ್‌ 15 ರಿಂದ ನವೆಂಬರ್‌ 30ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ನಗರದ 150ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಲ್ಲಿ ಹಮ್ಮಿಕೊಳ್ಳುತ್ತಿದ್ದು, ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿನ್ನದ ಉತ್ಸವದ ರಾಯಭಾರಿಯಾಗಿರುವ ನಟ ರಮೇಶ್‌ ಅರವಿಂದ್‌ ಅವರು ಉತ್ಸವದ ಲೋಗೋವನ್ನು ಸೋಮವಾರ ಅನಾವರಣಗೊಳಿಸಿದರು.

ಈ ಕೂಪನ್‌ಗಳನ್ನು ಪಡೆಯುವ ಮೂಲಕ ನಾಲ್ಕು ಸಾಪ್ತಾಹಿಕ ಡ್ರಾಗಳು ಮತ್ತು ಒಂದು ಬಂಪರ್‌ ಡ್ರಾದಲ್ಲಿ ಭಾಗವಹಿಸಲು ಅವಕಾಶವಿದೆ. 1 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ಮತ್ತು ಹ್ಯುಂಡೈ ಐ10 ನಿಯೋಸ್‌ ಕಾರು ಬಹುಮಾನವಾಗಿ ನೀಡಲಾಗುತ್ತಿದೆ.

The post ‘ಬೆಂಗಳೂರು ಚಿನ್ನದ ಉತ್ಸವ’: ಅಕ್ಟೋಬರ್‌ 15 ರಿಂದ 45 ದಿನಗಳ ಕಾಲ: ಚಿನ್ನ ಗೆಲ್ಲುವ ಅವಕಾಶ! appeared first on Ain Live News.

LEAVE A REPLY

Please enter your comment!
Please enter your name here