Home Uncategorized ಬೆಂಗಳೂರು: ಡ್ರೋನ್‌ ಮೂಲಕ ಬೀದಿ ನಾಯಿ ಗಣತಿಗೆ ತಜ್ಞರ ತಕರಾರು!

ಬೆಂಗಳೂರು: ಡ್ರೋನ್‌ ಮೂಲಕ ಬೀದಿ ನಾಯಿ ಗಣತಿಗೆ ತಜ್ಞರ ತಕರಾರು!

38
0

ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡ್ರೋನ್‌ ಸಹಾಯದಿಂದ ನಗರದ ಕೆಲವು ಕೆರೆಗಳ ಪ್ರದೇಶದಲ್ಲಿರುವ ಬೀದಿ ನಾಯಿಗಳ ಗಣತಿ ಕಾರ್ಯವನ್ನು ಬಿಬಿಎಂಪಿ, ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡ್ರೋನ್‌ ಸಹಾಯದಿಂದ ನಗರದ ಕೆಲವು ಕೆರೆಗಳ ಪ್ರದೇಶದಲ್ಲಿರುವ ಬೀದಿ ನಾಯಿಗಳ ಗಣತಿ ಕಾರ್ಯವನ್ನು ಬಿಬಿಎಂಪಿ, ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜುಲೈ 11ರಿಂದ 14 ದಿನ ಬೀದಿ ನಾಯಿಗಳ ಕ್ಷೇತ್ರ ಸಮೀಕ್ಷೆ ನಡೆಯಲಿದೆ. ಇದರ ಜೊತೆಗೆ, ‘ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್- ಭಾರತೀಯ ವಿಜ್ಞಾನ ಸಂಸ್ಥೆ’ ವೇಡೈನ್  ಸ್ಟಾರ್ಟ್ ಅಪ್‌ನ ಡ್ರೋನ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಬೀದಿ ನಾಯಿಗಳ ಸಮೀಕ್ಷೆಗೆ ಡ್ರೋನ್ ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲ ಯೋಜನೆಯಾಗಿದೆ.

ಸದ್ಯಕ್ಕೆ  ಉಚಿತವಾಗಿ ಡ್ರೋಣ್ ಸರ್ವೆಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಹಲವರ ಗಮನ ಸೆಳೆದಿದೆ. ಇದು ಸರ್ಕಾರಿ ಸಂಸ್ಥೆಯಲ್ಲಿ ನಡೆಯಬಹುದಾದ ಭ್ರಷ್ಟಾಚಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಬಹುತೇಕ ಸಮಯ ಸಿಬ್ಬಂದಿ ಕೇವಲ ಕಡತಗಳನ್ನು ಹೊತ್ತು ತರುವುದು ಕಂಡು ಬರುತ್ತಿದೆ. ಅವರು ತಿರುಗಾಡುತ್ತಿರುತ್ತಾರೆ ಮತ್ತು ಸಂಬಳ ತೆಗೆದುಕೊಳ್ಳುತ್ತಾರೆ. ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯು ಎಂಟು ವಲಯಗಳ ವ್ಯಾಪ್ತಿಗೆಯ 100 ಸದಸ್ಯರನ್ನು ಸೇರಿಸಿ ಕ್ಷೇತ್ರ ಸಮೀಕ್ಷೆ ನಡೆಸುವುದಾಗಿ ಹೇಳಿದೆ.  ಪಾಲಿಕೆ ಅಧಿಕಾರಿಗಳು ಇನ್ನೂ ಪ್ರಾಯೋಗಿಕ ಆಧಾರದ ಮೇಲೆ ಡ್ರೋನ್ ಸಮೀಕ್ಷೆಗೆ ಮುಂದಾಗಿದ್ದಾರೆ. ಡ್ರೋನ್‌ ಸಮೀಕ್ಷೆಯಿಂದ ಏನಾದರೂ ಪ್ರಯೋಜನವಾಗಿದೆಯೇ ಎನ್ನುವುದನ್ನು ಕಾಲವೇ ಹೇಳಲಿದೆ’ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಜಾತಿ ಗಣತಿ ಪರ 26 ವಿರೋಧ ಪಕ್ಷಗಳಿಂದ ಜಂಟಿ ನಿರ್ಣಯ

ಮೂಲಸೌಕರ್ಯ ತಜ್ಞರು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದಾರಿ ತಪ್ಪಿದ ಬೀದಿ ನಾಯಿಗಳು ಚರಂಡಿಗಳ ಒಳಗೆ ಅಥವಾ ನಿರ್ಮಾಣ ಹಂತದಲ್ಲಿರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ ಎಂದು ಹೇಳಿದ್ದಾರೆ.

ಡ್ರೋನ್ ಕ್ಯಾಮೆರಾಗಳು ಈ ವಿವರಗಳನ್ನು ಹೇಗೆ ಪಡೆಯುತ್ತವೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. “ಕ್ಷೇತ್ರ ಅಧ್ಯಯನವು ಉಗ್ರ ನಾಯಿಗಳು, ಇತ್ತೀಚಿನ ಬೀದಿ ನಾಯಿಗಳ ದಾಳಿ ಬಗ್ಗೆ ಸಾರ್ವಜನಿಕರಿಂದ ಇತರ ಮಾಹಿತಿ ಪಡೆಯುತ್ತದೆ, ಆದರೆ ಡ್ರೋನ್‌ಗಳು ಈ ಎಲ್ಲಾ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಗರ ತಜ್ಞ ಅಶ್ವಿನ್ ಮಹೇಶ್ ಮಾತನಾಡಿ, ಬಿಬಿಎಂಪಿ ವಾರ್ಡ್ ಸಮಿತಿ ಸಭೆ ನಡೆಸಿದ್ದರೆ ಈ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ”ಸಾರ್ವಜನಿಕರು ನೇರವಾಗಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ತಿಳಿಸುತ್ತಿದ್ದರು. ಎರಡನೆಯದಾಗಿ, ಆಡಳಿತದ ಕೊರತೆಯನ್ನು ತಂತ್ರಜ್ಞಾನದಿಂದ ಸರಿಪಡಿಸಲು ಸಾಧ್ಯವಿಲ್ಲ ಎಂದರು.

ಜುಲೈ 11ರಿಂದ ಮೊದಲ ಹಂತದಲ್ಲಿ ಹುಳಿಮಾವು, ಸಾರಕ್ಕಿ, ಸೀಗೇಹಳ್ಳಿ ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಗಳ ಪ್ರದೇಶದಲ್ಲಿ  ಡ್ರೋನ್‌ಗಳು ನಾಯಿಗಳ ಚಿತ್ರಗಳನ್ನು ಸೆರೆಹಿಡಿದಿವೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಬೀದಿ ನಾಯಿಗಳನ್ನು ಗುರುತಿಸಲು ಯಶಸ್ವಿಯಾಗಿದೆ.

ಇದನ್ನೂ ಓದಿ:  ಬೆಂಗಳೂರು: ಜೂನ್ ಅಂತ್ಯದೊಳಗೆ ಬೀದಿ ನಾಯಿ ಗಣತಿ ಆರಂಭಿಸಲು ಬಿಬಿಎಂಪಿ ಸಜ್ಜು

ದತ್ತಾಂಶವನ್ನು ಮುಂಬರುವ ದಿನಗಳಲ್ಲಿ ವಿಶ್ಲೇಷಿಸಲಾಗುವುದು. ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ತಂಡವು ಸಂಗ್ರಹಿಸಿದ ದತ್ತಾಂಶದೊಂದಿಗೆ ತಾಳೆ ಮಾಡಲಾಗುತ್ತದೆ. ದತ್ತಾಂಶವು ಪರಸ್ಪರ ಸಮಾನತೆ ಹೊಂದಿದ್ದರೆ, ಮುಂಬರುವ ವರ್ಷಗಳಲ್ಲಿ ನಗರದಲ್ಲಿನ ಎಲ್ಲಾ ಸುರಕ್ಷಿತ ಮತ್ತು ಮುಕ್ತ ಹಾರಾಟದ ಸ್ಥಳಗಳನ್ನು ಡ್ರೋನ್ ಗಳೊಂದಿಗೆ ಸಮೀಕ್ಷೆ ಮಾಡಲಾಗುತ್ತದೆ.

ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ವಿಧಾನಗಳಿಗೆ ಹೋಲಿಸಿದರೆ ಸಮಯ ಮತ್ತು ವೆಚ್ಚದಲ್ಲಿ  ಉಳಿತಾಯವಾಗಲಿದೆ. ಹಗಲು ಮತ್ತು ರಾತ್ರಿಯ ಸಮಯದಲ್ಲೂ ಸಮೀಕ್ಷೆಯನ್ನು ಕೈಗೊಳ್ಳಬಹುದಾಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here