Home Uncategorized ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಸೇರ್ಪಡೆ, ಡಿಲೀಟ್‌: ಮುಸ್ಲಿಂ ಹಾಗೂ ದಲಿತರೇ ಟಾರ್ಗೆಟ್

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಸೇರ್ಪಡೆ, ಡಿಲೀಟ್‌: ಮುಸ್ಲಿಂ ಹಾಗೂ ದಲಿತರೇ ಟಾರ್ಗೆಟ್

47
0

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗುತ್ತಿದ್ದೆ. ಪರಿಷ್ಕರಣೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಹಾಗೂ ದಲಿತ ಮತದಾರರನ್ನು ಟಾರ್ಗೆಟ್ ಮಾಡಲಾಗಿದೆ. ಬಹುತೇಕ ಅಲ್ಪಸಂಖ್ಯಾತ ಮತದಾರರ ಹೆಸರು ತೆಗೆದು ಹಾಕಲಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಬರೋಬ್ಬರಿ 45,927 ಮತದಾರರ ಹೆಸರು ತೆಗೆಯಲಾಗಿದೆ. ಇನ್ನು 35,258 ಮತದಾರರ ಹೆಸರು ಸೇರ್ಪಡೆ ಮಾಡಲಾಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರ ಒಟ್ಟು 6,42,354 ಮತದಾರರನ್ನು ಹೊಂದಿದೆ. 2019ರಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 3,64,708 ಇತ್ತು. ಆದರೆ ಈಗ ಮೂರೇ ವರ್ಷದಲ್ಲಿ ಡಬಲ್​ ಆಗಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ಮತದಾರರು ಸೇರ್ಪಡೆ ಹಾಗೂ ಡಿಲಿಟ್ ಆಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರ ಉತ್ತರಹಳ್ಳಿ, ವಸಂತಪುರ, ಸುಬ್ರಹ್ಮಣ್ಯಪುರ, ಯಲಚೇನಹಳ್ಳಿ, ಕೋಣನಕುಂಟೆ, ಅಂಜನಾಪುರ,ಬೇಗೂರು,ಕಾಳೆನ ಅಗ್ರಹಾರ ಕ್ಷೇತ್ರಗಳನ್ನು ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here