Home Uncategorized ಬೆಂಗಳೂರು ನಂದಿ ಹಾಲ್ಟ್ ರೈಲು ನಿಲ್ದಾಣದಲ್ಲಿ ಹೊಸ ಆಕರ್ಷಣೆ: ರೈಲು ಮ್ಯೂಸಿಯಂ ನಿರ್ಮಾಣ ಕಾರ್ಯ ಆರಂಭ

ಬೆಂಗಳೂರು ನಂದಿ ಹಾಲ್ಟ್ ರೈಲು ನಿಲ್ದಾಣದಲ್ಲಿ ಹೊಸ ಆಕರ್ಷಣೆ: ರೈಲು ಮ್ಯೂಸಿಯಂ ನಿರ್ಮಾಣ ಕಾರ್ಯ ಆರಂಭ

48
0

ಯಲುವಹಳ್ಳಿಯ 107 ವರ್ಷ ಹಳೆಯ ನಂದಿ ಹಾಲ್ಟ್ ರೈಲು ನಿಲ್ದಾಣದ ಆವರಣದಲ್ಲಿ 7 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬೆಂಗಳೂರು ರೈಲ್ವೆ ವಿಭಾಗದ ಮೊದಲ ರೈಲು ವಸ್ತುಸಂಗ್ರಹಾಲಯ ಮತ್ತು ರೈಲು ಪಾರ್ಕ್ ನಿರ್ಮಾಣ ಪ್ರಾರಂಭವಾಗಿದೆ. ಬೆಂಗಳೂರು: ಯಲುವಹಳ್ಳಿಯ 107 ವರ್ಷ ಹಳೆಯ ನಂದಿ ಹಾಲ್ಟ್ ರೈಲು ನಿಲ್ದಾಣದ ಆವರಣದಲ್ಲಿ 7 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬೆಂಗಳೂರು ರೈಲ್ವೆ ವಿಭಾಗದ ಮೊದಲ ರೈಲು ವಸ್ತುಸಂಗ್ರಹಾಲಯ ಮತ್ತು ರೈಲು ಪಾರ್ಕ್ ನಿರ್ಮಾಣ ಪ್ರಾರಂಭವಾಗಿದೆ.

ಇಲ್ಲಿಂದ ಸುಮಾರು 20 ಕಿ.ಮೀ ದೂರದಲ್ಲಿ ನಂದಿ ಬೆಟ್ಟ ಮತ್ತು ಇತ್ತೀಚೆಗೆ ಅನಾವರಣಗೊಂಡ ಆದಿ ಯೋಗಿ ಶಿವನ ಪ್ರತಿಮೆ ಇದ್ದು, ಪ್ರವಾಸಿ ತಾಣಗಳೊಂದಿಗೆ ಈ ಜಾಗ ಹೆಣೆದುಕೊಂಡಿರುವುದರಿಂದ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಮಾತನಾಡಿ, ಮೊದಲ ಹಂತವನ್ನು 2.38 ಕೋಟಿ ರೂ.ಗಳ ವೆಚ್ಚದಲ್ಲಿ ಸಿದ್ಧಪಡಿಸಲಾಗುತ್ತಿದೆ. ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ವರ್ಷಾಂತ್ಯದ ವೇಳೆಗೆ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ. ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಇದರ ಔಟ್ ಆಫ್ ಟರ್ನ್ (ಒಟಿ) ಪಾವತಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ಮೈಸೂರು ಮತ್ತು ಹುಬ್ಬಳ್ಳಿ ತಮ್ಮದೇ ಆದ ರೈಲು ವಸ್ತುಸಂಗ್ರಹಾಲಯಗಳನ್ನು ಹೊಂದಿದ್ದು ಇದು ಬೆಂಗಳೂರಿಗೆ ಮೊದಲನೆಯದಾಗಿದೆ ಎಂದು ಹೇಳಿದರು.

ನಗರ ಮೂಲದ ಬಿಂದು ಏಜೆನ್ಸಿ ಮ್ಯೂಸಿಯಂನ ಗುತ್ತಿಗೆಯನ್ನು ಪಡೆದುಕೊಂಡಿದೆ. ಹಳೆಯ ಬೋಗಿಗಳಿಂದ ರಚಿಸಲಾದ ಮಿನಿ ರೆಸ್ಟೋರೆಂಟ್, ಕಬ್ಬನ್ ಪಾರ್ಕ್ ನಂತಹ ಆಟಿಕೆ ರೈಲು, 3 ಡಿ ಆರ್ಟ್ ಗ್ಯಾಲರಿ ಮತ್ತು ಕ್ಯೂಆರ್ ಸಕ್ರಿಯಗೊಳಿಸಿದ ಚಿತ್ರ ಪೋಸ್ಟ್ ಕಾರ್ಡ್ ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ. ಅವುಗಳನ್ನು ವಿವಿಧ ನಿಲ್ದಾಣಗಳಿಂದ ಸಂಗ್ರಹಿಸಿದ ಪ್ರಾಚೀನ ಬೆಂಚುಗಳು, ಹಳಿಗಳು, ಬೋಗಿಗಳು ಮತ್ತು ವಸಾಹತುಶಾಹಿ ಯುಗದ ಪೀಠೋಪಕರಣಗಳನ್ನು ತಂದು ಜೋಡಿಸಲಾಗುವುದು ಎಂದು ತಿಳಿಸಿದರು.

ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಮೂಲಕ ಹರಿಯುವ ಶುಷ್ಕ ದಕ್ಷಿಣ ಪಿನ್ನಕಿನಿ ನದಿಯನ್ನು ಪುನರುಜ್ಜೀವನಗೊಳಿಸುವುದು ಇದರ ಮುಖ್ಯ ಉದ್ದೇಶ ಎಂದು ಎಡಿಆರ್ ಎಂ ತಿಳಿಸಿದೆ.

ನಾವು ಮೊದಲು ರೈಲು ವಸ್ತುಸಂಗ್ರಹಾಲಯವನ್ನು ಕೆಎಸ್ಆರ್ ರೈಲ್ವೆ ನಿಲ್ದಾಣದ ಒಳಗೆ ಸಿದ್ಧಪಡಿಸಲು ಬಯಸಿದ್ದೆವು. ಆದರೆ ಸೀಮಿತ ಭೂಮಿಯ ಲಭ್ಯತೆ ಮತ್ತು ಭಾರಿ ವೆಚ್ಚದ ಪರಿಣಾಮ 15 ಎಕರೆ ಭೂಮಿಯನ್ನು ಹೊಂದಿರುವ ನಂದಿ ಹಾಲ್ಟ್ ನಿಲ್ದಾಣದ ಕ್ಯಾಂಪಸ್ ಅನ್ನು ಆಯ್ಕೆ ಮಾಡಿದೆವು, ಇದರಲ್ಲಿ ಅರ್ಧದಷ್ಟು ಸ್ಥಳ ಮಾತ್ರ ವಸ್ತುಸಂಗ್ರಹಾಲಯಕ್ಕೆ ಅಗತ್ಯವಿದೆ ಎಂದು ಅವರು ಹೇಳಿದರು.

ಸ್ಕ್ರ್ಯಾಪ್ ಎಂದು ಪರಿಗಣಿಸಲಾದ ವಸ್ತುಗಳು ರೈಲ್ವೆಗೆ ಹೆಚ್ಚಿನ ಐತಿಹಾಸಿಕ ಮಹತ್ವವನ್ನು ಹೊಂದಿವೆ ಎಂದು ಹರಿಪ್ರಸಾದ್ ಹೇಳಿದರು.

“ಚನ್ನಪಟ್ಟಣ, ಮದ್ದೂರು ಮತ್ತು ಹೆಜ್ಜಾಲ ಸೇರಿದಂತೆ ಇತರ ನಿಲ್ದಾಣಗಳಿಂದ ಪ್ರಾಚೀನ ಡ್ರೆಸ್ಸಿಂಗ್ ಟೇಬಲ್ ಮತ್ತು ಡೈನಿಂಗ್ ಟೇಬಲ್ ಜೊತೆಗೆ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇತರ ಹಳೆಯ ವಸ್ತುಗಳನ್ನು ಸಂಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here