ಗಣರಾಜ್ಯೋತ್ಸವ ಹಿನ್ನೆಲೆ ಇಂದು ಜನವರಿ 20ರಿಂದ 10 ದಿನಗಳ ಕಾಲ ಜನವರಿ 30ರವರೆಗೆ ಬೆಂಗಳೂರಿನ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಲಿದೆ. ಇಂದು ಬೆಳಗ್ಗೆ ಲಾಲ್ ಬಾಗ್ ನಲ್ಲಿ 213ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆ ಇಂದು ಜನವರಿ 20ರಿಂದ 10 ದಿನಗಳ ಕಾಲ ಜನವರಿ 30ರವರೆಗೆ ಬೆಂಗಳೂರಿನ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಲಿದೆ. ಇಂದು ಬೆಳಗ್ಗೆ ಲಾಲ್ ಬಾಗ್ ನಲ್ಲಿ 213ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಇಂದು ಬಹಳ ಸಂತೋಷದಿಂದ 213 ಪ್ಲವರ್ ಶೋ ಉದ್ಘಾಟನೆ ಮಾಡಿದ್ದೇನೆ. ಈ ಬಾರಿಯ ಫ್ಲವರ್ ಶೋ ತುಂಬ ಚೆನ್ನಾಗಿ ಮೂಡಿಬಂದಿದೆ. ಪ್ರತಿವರ್ಷ ಲಕ್ಷಗಟ್ಟಲೆ ಜನರು ಈ ಫ್ಲವರ್ ಶೋಗೆ ಬರ್ತಾರೆ. ಈ ಬಾರಿ 10 ರಿಂದ 15 ಲಕ್ಷ ಜನರು ಬರುವ ನಿರೀಕ್ಷೆಯಿದೆ. ಜನರನ್ನ ನಿಭಾಯಿಸುವುದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ತೋಟಗಾರಿಕೆ ಇಲಾಖೆ ಮಾಡಿಕೊಂಡಿದೆ ಎಂದರು. ಮುಖ್ಯಮಂತ್ರಿ @BSBommai ಅವರು ಇಂದು ತೋಟಗಾರಿಕೆ ಇಲಾಖೆ & ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ-2023 ಉದ್ಘಾಟಿಸಿದರು. ತೋಟಗಾರಿಕಾ ಸಚಿವ @MunirathnaMLA,ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ ಇತರರು ಉಪಸ್ಥಿತರಿದ್ದರು pic.twitter.com/TrnncWim6M— CM of Karnataka (@CMofKarnataka) January 20, 2023
ಹಸಿರೀಕರಣ: ತೋಟಾಗಾರಿಕೆಯ ಫಲಪುಷ್ಪ ಪ್ರದರ್ಶನದಲ್ಲಿ ನಮ್ಮ ರಾಜ್ಯ ಸಂಪತ್ತು ಎಷ್ಟು ಇದೆ, ಎಷ್ಟು ವಿಶೇಷ ಹಾಗೂ ವಿಶಾಲವಾಗಿದೆ ಎಂಬುವುದನ್ನ ತಿಳಿಸುತ್ತದೆ. ನಗರದಲ್ಲಿ ತೋಟಗಾರಿಕೆಯ ಹಸೀರಿಕರಣವನ್ನ ಹೆಚ್ಚಿಸಲು ಅನುದಾನ ಮೀಸಲಿಡುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 100 ಕೋಟಿ ರೂಪಾಯಿಗಳನ್ನು ಹಸಿರೀಕರಣ ಹೆಚ್ಚಿಸಲು ಮೀಸಲಿಟ್ಟಿದ್ದೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸೀಕರಣ ಮಾಡುತ್ತೇವೆ ಎಂದರು.
ತೋಟಗಾರಿಕೆ ಕೃಷಿ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಮಾಡುತ್ತೇವೆ. ತೋಟಗಾರಿಕೆಯಲ್ಲಿ ಹಸಿರೀಕರಣ ಅಷ್ಟೇ ಅಲ್ಲದೇ ಉತ್ಪಾದನೆಯು ಹೆಚ್ಚಾಗಲಿದೆ. ಬೆಂಗಳೂರು ಗಾರ್ಡಾನ್ ಸಿಟಿ ಎಂದು ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಗಾರ್ಡನ್ ಸಿಟಿ ಅಭಿವೃದ್ಧಿ ಕಡಿಮೆಯಾಗಿದೆ. ಇನ್ಮುಂದೆ ಗಾರ್ಡಾನ್ ಸಿಟಿ ಹೆಸರಿಗೆ ತಕ್ಕಂತೆ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಬಿಬಿಎಂಪಿ ವ್ಯಾಪ್ತಿಯಾ ಉದ್ಯಾನವನ ಹಾಗೂ ತೋಟಗಾರಿಕೆ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಫಲಪುಷ್ಪ ಪ್ರದರ್ಶನ ಈ ಬಾರಿ ಯಶಸ್ವಿಯಾಗಲಿ ಎಂದರು.
ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವೇನು?: ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಒಂದು ವಿಷಯವನ್ನಿಟ್ಟುಕೊಂಡು ಅಲಂಕಾರ, ಫಲಪುಷ್ಪ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿ ಪುಷ್ಪಗಳ ಮೂಲಕ ಬೆಂಗಳೂರಿನ ಇತಿಹಾಸದ ಸಾರಲಿದ್ದಾರೆ. ಬೆಂಗಳೂರಿನ 1,500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ, ಬೆಂಗಳೂರಿನ ಸ್ವಾತಂತ್ರ್ಯ ಪೂರ್ವ & ನಂತರದ ಇತಿಹಾಸದ ಮಾಹಿತಿಯನ್ನು ದೇಶದ ವಿವಿಧ ಬಗೆಯ ಪುಷ್ಪಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಫ್ಲವರ್ ಶೋಗೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ.
#LalBagh Flower show-CM Bommai inaugurated 213th biannual flower show at Lal Bagh. Horticulture department used Bengaluru Bengaluru History as its theme.@KannadaPrabha,@NewIndianXpress,@XpressBengaluru,@BoskyKhanna,@ramupatil_TNIE,@MunirathnaMLA pic.twitter.com/fhziA6Qggs
— Mohammed Yacoob (@yacoobExpress) January 20, 2023
ಯಾವ ಜಾತಿಯ ಹೂವುಗಳಿರುತ್ತವೆ?: ಹಾಲೆಂಡ್, ಕೊಲಂಬಿಯಾ, ಇಸ್ರೇಲ್, ಚಿಲಿ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾ, ಯಥೋಪಿಯಾ ಸೇರಿದಂತೆ 11 ವಿದೇಶಗಳ 69 ಜಾತಿಯ ಹೂಗಳನ್ನು ಪ್ರದರ್ಶಿಸಲಾಗುತ್ತಿದೆ. ಡಾರ್ಜಿಲಿಂಗ್ ನ ಸಿಂಬಡಿಯ ಆರ್ಕಿಡ್ಸ್ ಹೂವು ಈ ಬಾರಿಯ ಮೇನ್ ಅರ್ಟ್ರಾಕ್ಷನ್ ಆಗಿದೆ.
ಪ್ರವೇಶ ಶುಲ್ಕ: ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 70 ರೂಪಾಯಿ, ರಜಾ ದಿನಗಳಲ್ಲಿ 75 ರೂಪಾಯಿ ನಿಗದಿ ಮಾಡಲಾಗಿದೆ. 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್ ಗಳಲ್ಲಿ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.