ಇನ್ನೂ ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು. ಬೆಂಗಳೂರು: ಇನ್ನೂ ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು. ತುರ್ತು ಸಂದರ್ಭದಲ್ಲಿ ಯಾವುದೇ ರೀತಿಯ ದೂರು ಅಥವಾ ಸಹಾಯಕ್ಕಾಗಿ ವಾಟ್ಸಾಪ್ ಸಂಖ್ಯೆ 9480801000ಗೆ ಕಳುಹಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
112 ನಿಯಂತ್ರಣ ಕೊಠಡಿ ಉನ್ನತೀಕರಿಸಲು ಮೊದಲ ಹೆಜ್ಜೆ ಇರಿಸಲಾಗಿದೆ. ಈ ನಿಯಂತ್ರಣ ಕೊಠಡಿ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಪೊಲೀಸರು ವಾಟ್ಸಾಪ್ ಮೂಲಕವೂ ದೂರು ಪಡೆಯಲು ಮುಂದಾಗಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಮ್ಮ ೧೧೨ ಉನ್ನತಿಕರಿಸಲು ಮೊದಲ ಹೆಜ್ಜೆಯಾಗಿ ನಾಗರೀಕರು ಇನ್ನು ಮುಂದೆ ನಮ್ಮ ೧೧೨ ಸೇವೆಯನ್ನು ಬೆಂಗಳೂರು ಪೊಲೀಸರ WhatsApp ನಂಬರ್ ೯೪೮೦೮೦೧೦೦೦ ಗೆ ಮಾಹಿತಿ ನೀಡುವುದರ ಮೂಲಕವೂ ಪಡೆಯಬಹುದಾಗಿದೆ. https://t.co/8YvbpEwz52
— B Dayananda IPS CP Bengalur ಪೊಲೀಸ್ ಆಯುಕ್ತ ಬೆಂಗಳೂರು (@CPBlr) June 14, 2023