Home ಕರ್ನಾಟಕ ಬೆಂಗಳೂರು : ನೀರಿನ ಟ್ಯಾಂಕರ್ ನೋಂದಣಿಗೆ ಮಾ.15ರ ವರೆಗೆ ಅವಕಾಶ

ಬೆಂಗಳೂರು : ನೀರಿನ ಟ್ಯಾಂಕರ್ ನೋಂದಣಿಗೆ ಮಾ.15ರ ವರೆಗೆ ಅವಕಾಶ

19
0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೋರ್ಟಲ್‍ನಲ್ಲಿ ಇದುವರೆಗೆ 1530 ಟ್ಯಾಂಕರ್ ಗಳು ನೋಂದಣಿಯಾಗಿದ್ದು, ಮಾ.15ರವರೆಗೆ ನೋಂದಣಿಗೆ ಕಾಲವಕಾಶ ನೀಡಲಾಗಿದೆ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.15ರ ನಂತರವೂ ನೋಂದಣಿಯಾಗದಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು. 1530 ಟ್ಯಾಂಕರ್ ಗಳಿಂದ ನಿತ್ಯ 10 ಎಂಎಲ್‍ಡಿ ನೀರನ್ನು ಒಂದೇ ಬಾರಿಗೆ ಸರಬರಾಜು ಮಾಡಬಹುದು. ನೋಂದಣಿಯಾದ ಟ್ಯಾಂಕರ್ ಗಳಿಗೆ ಸ್ಟಿಕ್ಕರ್ ಅಳವಡಿಸಲಾಗುವುದು. ಆ ಟ್ಯಾಂಕರ್ ಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿರುವ ದೂರುಗಳು ಕೇಳಿಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಕಾವೇರಿ ನೀರು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ: ಕಾವೇರಿ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಜಲಮಂಡಳಿಯ ಕಾಯ್ದೆ ಅಡಿ ಆದೇಶ ಹೊರಡಿಸಲಾಗಿದ್ದು, ಜನರು ಇದಕ್ಕೆ ಸಹಕರಿಸಬೇಕು. ಮಾ.15ರಿಂದ ಇದನ್ನು ಅನುಷ್ಠಾನಗೊಳಿಸಲಾಗುವುದು. ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದಲ್ಲಿ ಜಲಮಂಡಳಿ ಸಿಬ್ಬಂದಿಗಳು ಸ್ಥಳದಲ್ಲಿಯೇ ಆದೇಶದ ಅನುಸಾರ ದಂಡ ವಿಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here