ತನ್ನ ಸ್ನೇಹಿತನೇ ಪತ್ನಿಯ ತಲೆಕೆಡಿಸಿ ಅಪಹರಿಸುವ ಮೂಲಕ ಲವ್ ಜಿಹಾದ್ ನಡೆಸಿದ್ದಾನೆ ಎಂದು ವ್ಯಕ್ಕಿಯೊಬ್ಬ ಆರೋಪಿಸಿದ್ದಾನೆ. ನಗರದ ಖಾಸಗಿ ಕಾರ್ಖನೆಯೊಂದರಲ್ಲಿ ಕಾರ್ಮಿಕನಾಗಿರುವ ಅಜಿತ್ ತನ್ನ ಪತ್ನಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿದ ನಂತರ ಗುರುವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು: ತನ್ನ ಸ್ನೇಹಿತನೇ ಪತ್ನಿಯ ತಲೆಕೆಡಿಸಿ ಅಪಹರಿಸುವ ಮೂಲಕ ಲವ್ ಜಿಹಾದ್ ನಡೆಸಿದ್ದಾನೆ ಎಂದು ವ್ಯಕ್ಕಿಯೊಬ್ಬ ಆರೋಪಿಸಿದ್ದಾನೆ. ನಗರದ ಖಾಸಗಿ ಕಾರ್ಖನೆಯೊಂದರಲ್ಲಿ ಕಾರ್ಮಿಕನಾಗಿರುವ ಅಜಿತ್ ತನ್ನ ಪತ್ನಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿದ ನಂತರ ಗುರುವಾರ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಮೂರು ವರ್ಷಗಳ ಹಿಂದೆ ಇವರಿಬ್ಬರೂ ಮದುವೆಯಾಗಿದ್ದರು. ತನ್ನ ಹಾಗೂ ಹೆಂಡತಿ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಮಧ್ಯ ಪ್ರವೇಶಿಸಿದ್ದ ಕುಟುಂಬದ ಸ್ನೇಹಿತ ಸಲ್ಮಾನ್ ರಹಸ್ಯವಾಗಿ ಆಕೆಯ ತಲೆಕೆಡಿಸಿದ್ದು, ಸಂಬಂಧ ಬೆಳೆಸಿದ್ದಾನೆ ಎಂಬುದು ಅಜಿತ್ ಆರೋಪವಾಗಿದೆ.
ಸಲ್ಮಾನ್ ಹಾಗೂ ಪತ್ನಿಯ ಖಾಸಗಿ ಫೋಟೋಗಳು ಸಿಕ್ಕ ನಂತರ ಅವರಿಬ್ಬರ ನಡುವಿನ ಅಕ್ರಮ ಸಂಬಂಧ ದೃಢಪಟ್ಟಿದ್ದು, ಹೊಸಗುಡ್ಜದಹಳ್ಳಿಯ ನಿವಾಸಿಅಜಿತ್ ಶಾಕ್ ಆಗಿದ್ದಾರೆ. ಪೋಷಕರ ತೀವ್ರ ವಿರೋಧದ ನಡುವೆಯೇ ಆಗಸ್ಟ್ 2020 ರಲ್ಲಿ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರೂ ವಿವಾಹವಾಗಿದ್ದರು. ಸಲ್ಮಾನ್ ಬಾಲ್ಯದಿಂದಲೂ ಅಜಿತ್‌ಗೆ ಪರಿಚಿತನಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ಅಲ್ಲದೇ ಕಾರ್ಖಾನೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ತಮಿಳುನಾಡಿಗೆ ಹೋಗಿದ್ದಾಗ ತನ್ನ ಮೊಬೈಲ್ ಬಳಸಿ ಪತ್ನಿಗೆ ಕರೆ ಮಾಡುವ ಮೂಲಕ ಸಲ್ಮಾನ್ ಆಕೆಗೆ ಹತ್ತಿರವಾಗಿದ್ದಾನೆ. ತದನಂತರ ತಂಗಿ ಅಂತಾ ಹೇಳಿ ಮನೆಗೆ ಬರುತ್ತಿದ್ದು, ಸಲ್ಮಾನ್ ಆಗಾಗ್ಗೆ ಉಂಟಾಗುತ್ತಿದ್ದ ಜಗಳವನ್ನು ಬಗೆಹರಿಸುತ್ತಿದ್ದ ಎಂದು ಅಜಿತ್ ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಅಜಿತ್‌ನ ಹೆಂಡತಿ ತನ್ನ ತವರು ಮನೆಗೆ ತೆರಳಿದ್ದು, ವಾಪಸ್ ಬರಲು ನಿರಾಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಅಜಿತ್ ತನ್ನ ಹೆಂಡತಿಗೆ ಹೊಡೆದಿದ್ದಾನೆ. ಈ ಘಟನೆಯ ನಂತರ ಸಲ್ಮಾನ್ ಜೊತೆ ಪತ್ನಿ ರೋಮ್ಯಾನ್ಸ್ ಮಾಡುತ್ತಿರುವ ಫೋಟೋಗಳು ಸಿಕ್ಕಿವೆ.
ಈ ಪೋಟೋಗಳ ಬಗ್ಗೆ ಪ್ರಶ್ನಿಸಿದಾಗ ವಿಚ್ಚೇದನ ನೀಡುವಂತೆ ಪತ್ನಿ ಒತ್ತಾಯಿಸಿದ್ದಾಳೆ. ತಾನು ಸಲ್ಮಾನ್ ಜೊತೆ ಇರಲು ಬಯಸುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾಳೆ. ತನ್ನ ಹೆಂಡತಿ ಲವ್ ಜಿಹಾದಿಗೆ ಬಲಿಯಾಗಿದ್ದಾಳೆ ಎಂದು ಅಜಿತ್ ಆರೋಪಿದ್ದಾನೆ. ಆದರೆ, ಸಲ್ಮಾನ್ ತನಗೆ ನೆಮ್ಮದಿ ನೀಡಿದ್ದಾನೆ ಎಂದು ಆಕೆ ಹೇಳಿದರೆ, ಆಕೆಯ ಯಾವುದೇ ತಲೆಕೆಡಿಸಿಲ್ಲ, ಲವ್ ಜಿಹಾದ್ ಅಂತಹದ್ದೇನೂ ಆಗಿಲ್ಲ ಎಂದು ಸಲ್ಮಾನ್ ಹೇಳಿದ್ದಾನೆ.
ಆದಾಗ್ಯೂ, ಈ ಘಟನೆಯನ್ನು ಖಂಡಿಸಿರುವ ಹಿಂದೂ ಪರ ಕಾರ್ಯಕರ್ತರು, ಗಂಡನ ಮನೆಗೆ ವಾಪಸ್ ಬರುವಂತೆ ಹೆಂಡತಿಗೆ ಮನವ ಮಾಡಿದ್ದಾರೆ. ಆಕೆ ಲವ್ ಜಿಹಾದ್ ಗೆ ಬಲಿಯಾಗಿದ್ದು, ನಿರ್ಧಾರ ಬದಲಿಸದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಈವರೆಗೂ ಯಾವುದೇ ದೂರು ಸ್ವೀಕರಿಸಿಲ್ಲ.