Home Uncategorized ಬೆಂಗಳೂರು: ಮನೆಗೆಲಸದವನನ್ನು ಬರ್ಬರವಾಗಿ​ ಕೊಲೆಗೈದು ಮನೆ ಲೂಟಿ

ಬೆಂಗಳೂರು: ಮನೆಗೆಲಸದವನನ್ನು ಬರ್ಬರವಾಗಿ​ ಕೊಲೆಗೈದು ಮನೆ ಲೂಟಿ

8
0

ಬೆಂಗಳೂರು: ನಗರದಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಮನೆಗೆಲಸದವನನ್ನು​ ಕೊಲೆಗೈದು ಮನೆ ಲೂಟಿ ಮಾಡಲಾಗಿದೆ. ಕೋರಮಂಗಲದ 6ನೇ ಬ್ಲಾಕ್​ನಲ್ಲಿ ಬಿಲ್ಡರ್ ರಾಜಗೋಪಾಲ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕೆಲಸಗಾರನಾಗಿದ್ದ ಕರಿಯಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿ ಮನೆ ಲೂಟಿ ಮಾಡಿ ಹಂತಕರು ಪರಾರಿಯಾಗಿದ್ದಾರೆ.

ರಾಜಗೋಪಾಲರೆಡ್ಡಿ ಕುಟುಂಬದವರು ಕಾರ್ಯಕ್ರಮಕ್ಕೆಂದು ಬೇರೆಡೆ ತೆರಳಿದ್ದಾಗ ಕೃತ್ಯ ಎಸಗಲಾಗಿದೆ. ಇಂದು ಬೆಳಗ್ಗೆ ಅಡುಗೆ ಕೆಲಸಗಾರರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ಬಹದ್ದೂರ್​ ನಾಪತ್ತೆಯಾಗಿದ್ದು ಆತನೇ ಹತ್ಯೆಗೈದಿರುವ ಆರೋಪ ಕೇಳಿ ಬಂದಿದೆ. ನಾಪತ್ತೆಯಾಗಿರುವ ಅಸ್ಸಾಂ ಮೂಲದ ಬಹದ್ದೂರ್​ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಕೋರಮಂಗಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಾರ್ಯಕರ್ತರ ಜೋಷ್ ಮತ್ತೆ ಡಬಲ್ ಇಂಜಿನ್ ಸರ್ಕಾರಗಳನ್ನು ಅಧಿಕಾರಕ್ಕೆ ತರುತ್ತದೆ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್

ಅಕ್ರಮ ವಲಸಿಗರಿಂದ ಕಾಫಿತೋಟದ ಮಾಲೀಕನ ಮೇಲೆ ಹಲ್ಲೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್‍ನಲ್ಲಿ ಅಕ್ರಮ ವಲಸಿಗರು ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಅಡ್ವಾನ್ಸ್ ಪಡೆದು, ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಅಸ್ಸಾಂ ಕಾರ್ಮಿಕರು ಮಚ್ಚು, ದೊಣ್ಣೆಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.

ತೋಟದ ಮಾಲೀಕರು ಎಚ್ಚರದಿಂದ ಇರಿ. ಸಾವಿರಾರು ಅಕ್ರಮ ಬಾಂಗ್ಲಿಗರು ಅಸ್ಸಾಮಿಗರ ಸೋಗಿನಲ್ಲಿ ಕಾಫಿನಾಡಲ್ಲಿದ್ದಾರೆ ಎಂದು ಹಲ್ಲೆಗೊಳಗಾದ ತೋಟದ ಮಾಲೀಕ ಮಹಮದ್ ಅಜ್ಗರ್ ತಿಳಿಸಿದ್ದು ಘಟನೆ ಸಂಬಂಧ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here