Home Uncategorized ಬೆಂಗಳೂರು ಮೂಲದ ರೇವಾ ಕಂಪೆನಿಯನ್ನು ಮುಳುಗಿಸ ಹೊರಟಿದ್ದ ವಾಜಪೇಯಿ ಸರಕಾರ!

ಬೆಂಗಳೂರು ಮೂಲದ ರೇವಾ ಕಂಪೆನಿಯನ್ನು ಮುಳುಗಿಸ ಹೊರಟಿದ್ದ ವಾಜಪೇಯಿ ಸರಕಾರ!

28
0

ಕೊಚ್ಚಿ: ಏಷ್ಯಾದ ಮೊದಲ ವಿದ್ಯುತ್ ಚಾಲಿತ ಕಾರು ರೇವಾ ಮಾರುಕಟ್ಟೆಗೆ ಬರುವ ಒಂದು ತಿಂಗಳ ಮುಂಚೆ ವಾಜಪೇಯಿ ನೇತೃತ್ವದ ಸರಕಾರ, ಒಮ್ಮೆಲೇ ತೆರಿಗೆ ಹೆಚ್ಚಳ ಮಾಡಿ ಕಂಪೆನಿಯನ್ನು ಮುಳುಗಿಸಹೊರಟಿತ್ತು ಎಂದು ರೇವಾದ ಸಂಸ್ಥಾಪಕ ಚೇತನ್ ಮೈನಿ ಹೇಳಿದ್ದಾರೆ.

ಕೇರಳ ಕಾಂಗ್ರೆಸ್ ನ X ಖಾತೆಯಲ್ಲಿ ಬಿಡುಗಡೆಯಾಗಿರುವ ವೀಡಿಯೊ ಸಂವಾದದ ತುಣುಕಿನಲ್ಲಿ ಚೇತನ್ ಮೈನಿ ಅವರು ಈ ಹೇಳಿಕೆ ನೀಡಿದ್ದಾರೆ. ವಿದ್ಯುತ್ ಚಾಲಿತ ವಾಹನಗಳ ಮೇಲಿನ ಸಬ್ಸಿಡಿಯನ್ನು ಸರಕಾರ ರದ್ದುಗೊಳಿಸಿ, ತೆರಿಗೆಗಳನ್ನು ದ್ವಿಗುಣಗೊಳಿಸಿತು. ಜೊತೆಗೆ ಕೆಲವರಿಗೆ ಅನುಕೂಲ ಮಾಡಿಕೊಡಲು ಪೆಟ್ರೋಲ್ ವಾಹನಗಳ ಮೇಲಿನ ತೆರಿಗೆ ಕಡಿತಗೊಳಿಸಿತು. ನಾವು ಸಬ್ಸಿಡಿ ಸಿಗುವ ಯೋಚನೆಯಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಯೋಚನೆ ಮಾಡಿದ್ದೆವು. ಆ ಸಬ್ಸಿಡಿಗಳೆಲ್ಲ ಯಾರಿಗೆ ಹೋದವು ಎಂದು ಗೊತ್ತಿಲ್ಲ. ಆ ಸಮಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿತ್ತು” ಎಂದು ಅವರು ಹೇಳಿರುವುದು ವೀಡಿಯೊದಲ್ಲಿದೆ.

ಏಷ್ಯಾದ ಮೊದಲ ಇಲೆಕ್ಟ್ರಿಕ್ ವೆಹಿಕಲ್ (EV) ಯನ್ನು ಬೆಂಗಳೂರು ಮೂಲದ ರೇವಾ ಕಂಪೆನಿ ತಯಾರಿಸಿತ್ತು. ಅದುವರೆಗೂ ಪೆಟ್ರೋಲ್ / ಡಿಸೇಲ್ ವಾಹನಗಳೇ ಆಳುತ್ತಿದ್ದ ಮಾರುಕಟ್ಟೆಗೆ ರೇವಾ ವಾಹನಗಳು ಸಂಚಲನ ಮೂಡಿಸಿದ್ದವು.

ಕೇರಳ ಕಾಂಗ್ರೆಸ್ ಖಾತೆಯ ಟ್ವೀಟ್ ನಲ್ಲಿ ವೀಡಿಯೋ ಸಾರಾಂಶ ವಿವರಿಸಿ, “ಫಲಾನುಭವಿ ಯಾರು ಎಂಬುದರ ಕುರಿತು ಯಾವುದೇ ಊಹೆಗಳಿವೆಯೇ?” ಎಂದು ಪ್ರಶ್ನಿಸಿದೆ.

ಈ ಪೋಸ್ಟ್ ಗೆ ಫ್ರಾಂಕೀ ಚಾಕೋ ಎನ್ನುವ ಬಳಕೆದಾರರು @ChackoFrankee ನೈಜ ಕತೆ ಎಂದು ಕಮೆಂಟ್‌ ಮಾಡಿದ್ದಾರೆ.

ಮುಂಬೈ ಗೈ @Mumbai_namaskar ಎಂಬವರು ರಿಲಾಯನ್ಸ್‌, ಮಹೀಂದ್ರಾ, ಟಾಟಾ ಎಂದು ಕಮೆಂಟ್‌ ಮಾಡಿದ್ದಾರೆ.

ಭರತ್ @Bharath12450842 ಎಂಬ ಬಳಕೆದಾರರು, “ಹೇ ಕಾಂಗ್ರೆಸಿಗರೇ, ನಿಮ್ಮ ಪೋಸ್ಟರ್ ಬಾಯ್ @ಯಶವಂತ್ ಸಿನ್ಹಾ 2001 ರಲ್ಲಿ ಹಣಕಾಸು ಸಚಿವರಾಗಿದ್ದರು. ಅವರ ಈ ರೀತಿಯ ಕೃತ್ಯಗಳಿಂದಾಗಿ, 2002 ರಲ್ಲಿ ವಾಜಪೇಯಿ ಅವರನ್ನು ಹಣಕಾಸು ಸಚಿವ ಸ್ಥಾನದಿಂದ ತೆಗೆದುಹಾಕಿದರು. ಭ್ರಷ್ಟ ಕಾಂಗ್ರೆಸಿಗರೇ ನಾಚಿಕೆಯಾಗಬೇಕು ನಿಮಗೆ” ಎಂದು ಕಮೆಂಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here