ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ, ಕಾರ್ಗಿಲ್ ವೀರ ಯೋಧರು, ಸಂಚಾರಿ ಪೊಲೀಸರ ತಂಡ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿ “ರೈಡ್ ವಿಥ್ ಸೋಲ್ಡರ್ಸ್” ಬೈಕ್ ಜಾಥಾ ಆಯೋಜಿಸಲಾಗಿತ್ತು. ಬೆಂಗಳೂರು: ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ, ಕಾರ್ಗಿಲ್ ವೀರ ಯೋಧರು, ಸಂಚಾರಿ ಪೊಲೀಸರ ತಂಡ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿ “ರೈಡ್ ವಿಥ್ ಸೋಲ್ಡರ್ಸ್” ಬೈಕ್ ಜಾಥಾ ಆಯೋಜಿಸಲಾಗಿತ್ತು.
ಎಂ.ಜಿ. ರಸ್ತೆಯ ಮಾಣಿಕ್ ಶಾ ಪರೇಡ್ ಮೈದಾನದಿಂದ ವಿಜಯನಗರದ ಬಿಜಿಎಸ್ ಕ್ರೀಡಾಂಗಣದವರೆಗೆ ಸುಮಾರು 12 ಕಿಲೋಮೀಟರ್ ದೂರ ಒಂದು ಸಾವಿರ ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜದೊಂದಿಗೆ ಜಾಥಾ ಸಾಗಿತು. ಶಾಸಕ ಸಿ ಕೆ . ರಾಮಮೂರ್ತಿ, ಮಾಜಿ ಯೋಧರ ಸಂಘದ ಅಧ್ಯಕ್ಷ ಶಿವಣ್ಣ, ಮತ್ತಿತರ ಗಣ್ಯರು ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬಾಂಬ್ ದಾಳಿಯಿಂದ ಬದುಕುಳಿದು ಬಂದ ಕಾರ್ಗಿಲ್ ಯೋಧ ನವೀನ್ ನಾಗಪ್ಪ ಪಾಲ್ಗೊಂಡು ದೇಶಾಭಿಮಾನ ಉಕ್ಕಿಸಿದರು.
ಕಾರ್ಗಿಲ್ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ವೀರ ಯೋಧರನ್ನು ಸ್ಮರಿಸಿ, ಹುತಾತ್ಮರಾದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಜಾಥಾ ಆಯೋಜಿಸಲಾಗಿತ್ತು. ಮಹಿಳಾ ಬೈಕರ್ಸ್ ಗಳು, ಸಂಚಾರಿ ಪೊಲೀಸರು, ಬಿ.ಎಸ್.ಎಫ್ ಯೋಧರು, 300 ಮಂದಿ ಮಾಜಿ ಯೋಧರು, ನೂರಾರು ವೀರ ನಾರಿಯರು ಬೈಕ್ ಗಳ ಮೂಲಕ ಸೇನಾ ಪಡೆಗೆ ಗೌರವ ಸಲ್ಲಿಸಿದರು.