Home Uncategorized ಬೆಂಗಳೂರು: ರೌಡಿಶೀಟರ್ ಗಳ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ರೌಡಿಶೀಟರ್ ಗಳ ಜಗಳ ಕೊಲೆಯಲ್ಲಿ ಅಂತ್ಯ

32
0

ರಾತ್ರಿ ಒಟ್ಟಿಗೆ ಕುಳಿತು ಪಾರ್ಟಿ ಮಾಡುತ್ತಿದ್ದ ರೌಡಿಶೀಟರ್ ಗಳ ನಡುವೆ ಜಗಳ ಏರ್ಪಟ್ಟಿದ್ದು, ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರು: ರಾತ್ರಿ ಒಟ್ಟಿಗೆ ಕುಳಿತು ಪಾರ್ಟಿ ಮಾಡುತ್ತಿದ್ದ ರೌಡಿಶೀಟರ್ ಗಳ ನಡುವೆ ಜಗಳ ಏರ್ಪಟ್ಟಿದ್ದು, ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಸಾಗರ್ (23) ಹತ್ಯೆಯಾದ ರೌಡಿ ಶೀಟರ್ ಆಗಿದ್ದಾನೆ. ನವೀನ್ ಎಂಬ ಮತ್ತೊಬ್ಬ ರೌಡಿ ಶೀಟರ್ ಮಚ್ಚಿನಿಂದ ಬರ್ಬರವಾಗಿ ಹಲ್ಲೆ ನಡೆಸಿ ಸಾಗರ್ ನನ್ನು ಹತ್ಯೆ ಮಾಡಿದ್ದಾನೆ.

ಕೆಪಿ ಅಗ್ರಹಾರದ ನಿರ್ಜನ ಸ್ಥಳದಲ್ಲಿ ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನವೀನ್ ಸಾಗರ್ ಮೇಲೆ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಹೊರಗೆ ಹೋಗುತ್ತಿದ್ದೇನೆಂದು ತಾಯಿಗೆ ಹೇಳಿದ್ದ ಸಾಗರ್, ಸೋಮವಾರ ಸಂಜೆ ನವೀನ್ ಜೊತೆಗೆ ಪಾರ್ಟಿಗೆ ಹೋಗಿದ್ದಾನೆ. ಬಳಿಕ ಕೆಪಿ ಅಗ್ರಹಾರದ ನಿರ್ಜನ ಸ್ಥಳದಲ್ಲಿ ಕುಳಿತು ಇಬ್ಬರೂ ತಾವು ತಂದಿದ್ದ ಮದ್ಯ, ತಿಂಡಿ-ತಿನಿಸುಗಳನ್ನು ಸೇವಿಸಿದ್ದಾರೆ.

ಪಾರ್ಟಿ ವೇಳೆ ನವೀನ್ ತನಗೆ ಹೆಚ್ಚು ಮದ್ಯ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ನವೀನ್ ಮತ್ತು ಸಾಗರ್ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಬಳಿಕ ವಿಕೋಪಕ್ಕೆ ತಿರುಗಿ ಕೋಪದ ಭರದಲ್ಲಿ ನವೀನ್ ತನ್ನ ಬಳಿಯಿದ್ದ ಮಚ್ಚು ತೆಗೆದುಕೊಂಡು ಸಾಗರ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ. ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ್‌ಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here