Home Uncategorized ಬೆಂಗಳೂರು: ಲಿಫ್ಟ್ ಕೇಳಿ ಹಣ, ಚಿನ್ನಾಭರಣ ಕಳೆದು ಕೊಂಡ ಸ್ನೇಹಿತರು; ಮೂವರ ಬಂಧನ

ಬೆಂಗಳೂರು: ಲಿಫ್ಟ್ ಕೇಳಿ ಹಣ, ಚಿನ್ನಾಭರಣ ಕಳೆದು ಕೊಂಡ ಸ್ನೇಹಿತರು; ಮೂವರ ಬಂಧನ

25
0

ಸಂತ್ರಸ್ತರು ಅಡುಗೆ ಗುತ್ತಿಗೆಗಾಗಿ ನಗರಕ್ಕೆ ಬಂದಿದ್ದರು.  ಚಿತ್ರದುರ್ಗದ ಭರಮಸಾಗರದಿಂದ ನಾಗ್ಯಾನಾಯ್ಕ ಹಾಗೂ ಮಂಜು ನಾಯ್ಕ ನಗರಕ್ಕೆ ಬಂದಿದ್ದರು. ಶನಿವಾರ ಬೆಳಗಿನ ಜಾವ 3.15ರ ಸುಮಾರಿಗೆ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು 3.30ರ ಸುಮಾರಿಗೆ ಕಾರು ಹತ್ತಿದ್ದಾರೆ. ಬೆಂಗಳೂರು: ಯಾವುದೇ ಸಾರಿಗೆ ಸಿಗದ ಕಾರಣ  ಇಬ್ಬರು ಸ್ನೇಹಿತರು ಕಾರಿನವರ ಬಳಿ ಡ್ರಾಪ್‌ ಕೇಳಿ ಭಾರೀ ಬೆಲೆ ತೆತ್ತಿದ್ದಾರೆ. ಚಿತ್ರದುರ್ಗದ 40 ವರ್ಷದ ಅಡುಗೆ ಗುತ್ತಿಗೆದಾರ ಮತ್ತು ಅವರ ಸ್ನೇಹಿತ ಗುರುವಾರ ಮುಂಜಾನೆ 3.30 ರ ಸುಮಾರಿಗೆ ಕಾರು ನಿಲ್ಲಿಸಿ ಡ್ರಾಪ್ ಕೇಳಿದ್ದಾರೆ.

ಕಾರಿನಲ್ಲಿದ್ದವರು ದರೋಡೆಕೋರರು ಎಂಬುದು ತಿಳಿಯಲಿಲ್ಲ, ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಅವರು ಸಂತ್ರಸ್ತರನ್ನು ಯುಪಿಐ ವಹಿವಾಟು ಮಾಡುವಂತೆ ಒತ್ತಾಯಿಸಿದರು. ಸುಮಾರು 25 ನಿಮಿಷಗಳ ಕಾಲ ಸಂತ್ರಸ್ತರನ್ನು ಹಿಡಿದಿಟ್ಟುಕೊಂಡ ಆರೋಪಿಗಳು, ಉಳ್ಳಾಲ ಮುಖ್ಯರಸ್ತೆ ಬಳಿ ಅವರನ್ನು ಹೊರಗೆ ತಳ್ಳಿ ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ.

ಸಂತ್ರಸ್ತರು ಅಡುಗೆ ಗುತ್ತಿಗೆಗಾಗಿ ನಗರಕ್ಕೆ ಬಂದಿದ್ದರು.  ಚಿತ್ರದುರ್ಗದ ಭರಮಸಾಗರದಿಂದ ನಾಗ್ಯಾನಾಯ್ಕ ಹಾಗೂ ಮಂಜು ನಾಯ್ಕ ನಗರಕ್ಕೆ ಬಂದಿದ್ದರು. ಶನಿವಾರ ಬೆಳಗಿನ ಜಾವ 3.15ರ ಸುಮಾರಿಗೆ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು 3.30ರ ಸುಮಾರಿಗೆ ಕಾರು ಹತ್ತಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳ ಮೇಲೆ ಧರ್ಮ ನಿಂದನೆ ಹಲ್ಲೆ ಆರೋಪ: ಹಾಸನದ ಸರ್ಕಾರಿ ವಸತಿ ಶಾಲೆ ವಿರುದ್ಧ ದೂರು

ನಾಯಂಡಹಳ್ಳಿಗೆ  ಹೋಗಬೇಕಿತ್ತು, ಆದರೆ ಆ ವೇಳೆ ಯಾವುದೇ ವಾಹನ ಸಿಗಲಿಲ್ಲ, ಹೀಗಾಗಿ  ಗೊರಗುಂಟೆಪಾಳ್ಯದಲ್ಲಿ  ಬಂದ ಕಾರನ್ನು ನಿಲ್ಲಿಸಿದೆವು. ಸುಮನಹಳ್ಳಿ ಸೇತುವೆ ದಾಟಿದ ಬಳಿಕ ಆರೋಪಿಗಳು ವಾಹನ ಚಲಾಯಿಸಿಕೊಂಡು ಹೋಗಿ ಫ್ಲೈಓವರ್ ಬದಿಯಲ್ಲಿ ನಿಲ್ಲಿಸಿದ್ದರು. ನಮ್ಮ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ನಂತರ ಯುನಿವರ್ಸಿಟಿ ಕ್ಯಾಂಪಸ್, ಪಾಪರೆಡ್ಡಿಪಾಳ್ಯ ಕಡೆಗೆ ಹೊರಟು ಉಳ್ಳಾಲ ಮುಖ್ಯರಸ್ತೆಯ ದೇವಸ್ಥಾನದ ಬಳಿ ಕಾರನ್ನು ನಿಲ್ಲಿಸಿ ನಮ್ಮನ್ನು ಕಾರಿನಿಂದ ತಳ್ಳಿದರು ಎಂದು ಹೇಳಿದ್ದಾರೆ.

ನಂತರ ನಾವು ಮುಖ್ಯ ರಸ್ತೆಯ ಕಡೆಗೆ ಓಡಿಹೋಗಿ ಆಸ್ಪತ್ರೆಗೆ ತಲುಪಿದೆವು, ಅಲ್ಲಿಂದ ನಾವು ಸಹಾಯ ಕೋರಿ ಪೊಲೀಸರಿಗೆ ಕರೆ ಮಾಡಿದೆವು. ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಬಂದರು. ಮಂಗಳವಾರ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರಿಂದ ನಮಗೆ ಕರೆ ಬಂದಿತು ಎಂದು ದೂರುದಾರರಾದ ಪಿ ನಾಗ್ಯಾನಾಯ್ಕ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಇದನ್ನೂ ಓದಿ: Love Jihad: ನನ್ನ ಮೇಲೆ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಂದ ಮಹಿಳಾ ಟೆಕ್ಕಿ; ಬೆಂಗಳೂರು ಪೊಲೀಸರ ತನಿಖೆ ಆರಂಭ

ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶನಿವಾರದಿಂದ ಕಳ್ಳತನ ಮಾಡುತ್ತಿದ್ದ ಇವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸೋಮವಾರ ನಾಗರಭಾವಿ ಸಮೀಪದ ಮಾಳಗಾಲದಲ್ಲಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಗಿರೀಶ್ ಮತ್ತು ನವೀನ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here