ಬೆಂಗಳೂರು: ಲಿವ್ ಇನ್ ಪಾರ್ಟ್ನರ್ ಯುವತಿಯನ್ನು ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ವರ್ತೂರು ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷದ ರಂಜಿತಾ ಪ್ರಿಯಕರ ಅಯ್ಯಪ್ಪನಿಂದಲೇ ಕೊ*ಲೆಯಾದ ಯುವತಿ.
ಮೃತ ರಂಜಿತಾ ಹಾಗೂ ಆರೋಪಿ ಅಯ್ಯಪ್ಪ ಇಬ್ಬರು ಮೂಲತಃ ಕೊಡಗಿನ ಪೊನ್ನಂಪೇಟೆ ನಿವಾಸಿಗಳು. ವರ್ತೂರು ಬಳಿಯ ಡ್ರೈ ಪ್ರೂಟ್ ಅಂಗಡಿಯಲ್ಲಿ ಸೂಪರ್ವೈಸರ್ ಆಗಿ ಅಯ್ಯಪ್ಪ ಕೆಲಸ ಮಾಡಿಕೊಂಡಿದ್ದನು. ಮದುವೆಯಾಗಿ ಹೆಂಡ್ತಿಯನ್ನು ಬಿಟ್ಟಿದ್ದ ಅಯ್ಯಪ್ಪ ಪಕ್ಕದೂರಿನ ರಂಜಿತಾಳನ್ನು ಪ್ರೀತಿಸುತ್ತಿದ್ದನು.ಈ ಅಯ್ಯಪ್ಪನನ್ನು ಮದುವೆಯಾಗಬೇಕೆಂದು ರಂಜಿತಾ ಬೆಂಗಳೂರಿಗೆ ಬಂದಿದ್ದಳು.
ಪತ್ನಿಗೆ ಡಿವೋರ್ಸ್ ನೀಡದೇ ರಂಜಿತಾ ಜೊತೆಯಲ್ಲಿಯೇ ಅಯ್ಯಪ್ಪ ಸಂಸಾರ ನಡೆಸುತ್ತಿದ್ದನು. ಕಳೆದ ಕೆಲ ತಿಂಗಳಿಂದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಗ್ರಾಮದಲ್ಲಿ ಇಬ್ಬರು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮದುವೆ ವಿಚಾರವಾಗಿ ಅಯ್ಯಪ್ಪ ಮತ್ತು ರಂಜಿತಾ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಅಯ್ಯಪ್ಪ ವೈಯರ್ನಿಂದ ಕುತ್ತಿಗೆ ಬಿಗಿದು ರಂಜಿತಾಳನ್ನು ಕೊ*ಲೆ ಮಾಡಿದ್ದಾನೆ.
ಆದಾಗ್ಯೂ, ಅವರಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಜಗಳ ನಡೆಯುತಿತ್ತು ಎನ್ನಲಾಗಿದೆ. ಈ ಹಿಂದೆ ಅಯ್ಯಪ್ಪ ತನ್ನ ಮೇಲೆ ಜಾತಿ ನಿಂದನೆ ಮಾಡಿ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ರಂಜಿತಾ ಪೋಷಕರಿಗೆ ತಿಳಿಸಿದ್ದಾಳಂತೆ. ಕೆಲವು ದಿನಗಳ ನಂತರ ರಂಜಿತಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಅಯ್ಯಪ್ಪ ಆಕೆಯ ಕುಟುಂಬಕ್ಕೆ ಕರೆ ಮಾಡಿದ್ದಾನೆ. ಇದರ ಬಗ್ಗೆ ಅನುಮಾನಗೊಂಡ ಯುವತಿ ಮನೆಯವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ತನಿಖೆಯ ವೇಳೆ ರಂಜಿತಾಳನ್ನು ಕೇಬಲ್ ವೈರ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ದೃಢಪಡಿಸಿದ್ದು, ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯ್ಯಪ್ಪ ಅವರನ್ನು ಬಂಧಿಸಲಾಗಿದೆ. ರಂಜಿತಾ ಅವರ ಕುಟುಂಬಸ್ಥರು ಮೃತದೇಹವನ್ನು ಕೊಡಗು ಜಿಲ್ಲೆಗೆ ಕೊಂಡೊಯ್ದಿದ್ದಾರೆ.
ಸದ್ಯ ಪೊಲೀಸರು ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
