Home Uncategorized ಬೆಂಗಳೂರು: ವಿಧಾನಸೌಧದಿಂದ 1 ಕಿಲೋಮೀಟರ್‌ ಅಂತರದಲ್ಲಿ ಬಸ್‌ ನಿಲ್ದಾಣವನ್ನೇ ಹೊತ್ತೊಯ್ದ ಖದೀಮರು!

ಬೆಂಗಳೂರು: ವಿಧಾನಸೌಧದಿಂದ 1 ಕಿಲೋಮೀಟರ್‌ ಅಂತರದಲ್ಲಿ ಬಸ್‌ ನಿಲ್ದಾಣವನ್ನೇ ಹೊತ್ತೊಯ್ದ ಖದೀಮರು!

57
0

ಬೆಂಗಳೂರಿನಲ್ಲಿ ಖದೀಮರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಬೆಲೆಬಾಳುವ ವಸ್ತುಗಳಿಗೆ ಕೈ ಹಾಕುತ್ತಿದ್ದ ಕಳ್ಳರು ಇದೀಗ ಬಸ್ ಶೆಲ್ಟರ್ (ಬಸ್ ತಂಗುದಾಣ) ಅನ್ನೇ ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು: ಬೆಂಗಳೂರಿನಲ್ಲಿ ಖದೀಮರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಬೆಲೆಬಾಳುವ ವಸ್ತುಗಳಿಗೆ ಕೈ ಹಾಕುತ್ತಿದ್ದ ಕಳ್ಳರು ಇದೀಗ ಬಸ್ ಶೆಲ್ಟರ್ (ಬಸ್ ತಂಗುದಾಣ) ಅನ್ನೇ ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಟೇನ್‌ಲೆಸ್ ಸ್ಟೀಲ್ ರಚನೆಯಿಂದ ಭದ್ರವಾಗಿದ್ದ ಹೊಚ್ಚಹೊಸ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಶೆಲ್ಟರ್ ಅನ್ನು ಕದೀಮರು ಕಳ್ಳತನ ಮಾಡಿದ್ದಾರೆ.

ಈ ಸಂಬಂಧ ತಂಗುದಾಣ ನಿರ್ಮಾಣ ಮಾಡಿದ್ದ ಖಾಸಗಿ ಸಂಸ್ಥೆಯ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಎಂಬುವರು ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕುಮಟಾ: ವ್ಯಕ್ತಿ ಕೊಲೆ ಪ್ರಕರಣ ಬೇಧಿಸಲು ನೆರವಾದ ಕೆಎಸ್ ಆರ್ ಟಿಸಿ ಬಸ್ ಟಿಕೆಟ್; ಹತ್ಯೆಯ ಹಿಂದಿನ ರೂವಾರಿ ಯಾರು?

ಬಿಬಿಎಂಪಿ ಅನುಮತಿ ಪಡೆದು ತಮ್ಮ ಕಂಪನಿಯ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗ 10 ಲಕ್ಷ ರೂ. ವೆಚ್ಚದಲ್ಲಿ ಆಗಸ್ಟ್​ 21 ರಂದು ಸ್ಟೇನ್ ಲೇಸ್ ಸ್ಟೀಲ್ ಬಳಸಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಆ. 28ರಂದು ಎಲ್ಲ ಬಸ್ ನಿಲ್ದಾಣಗಳನ್ನು ಪರೀಕ್ಷಣೆ ಮಾಡುವಂತೆ ಇಲ್ಲಿಗೂ ಬಂದು ನೋಡಿದಾಗ ಬಸ್ ನಿಲ್ದಾಣವೇ ನಾಪತ್ತೆಯಾಗಿರುವುದು ಕಂಡು ಬಂದಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ತಾವು ಬಸ್ ನಿಲ್ದಾಣ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದರಿಂದ ಅಚ್ಚರಿಕೊಂಡ ರವಿ ರೆಡ್ಡಿ ಅವರು, ಸೆ. 30ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು, ಬಿಎಂಟಿಸಿ ಯಾವುದೇ ಬಸ್ ನಿಲ್ದಾಣಗಳನ್ನೂ ನಿರ್ಮಿಸುತ್ತಿಲ್ಲ. ಬಿಬಿಎಂಪಿ ನಿರ್ಮಿಸುತ್ತಿದೆ. ಯಾರೋ ಬಸ್ ನಿಲ್ದಾಣವನ್ನು ಹೊತ್ತೊಯ್ದಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡುತ್ತೇನೆ. ಹೊಸ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿತ್ತೇ ಎಂಬುದರ ಕುರಿತು ಮಾಹಿತಿ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

#WATCH | Karnataka: A bus stop shelter worth Rs. 10 lakhs was allegedly stolen in Bengaluru. The police have registered a case after a bus stop shelter set up on Cunningham Road in Bengaluru had gone missing.

Karnataka Transport Minister Ramalinga Reddy says, “BMTC (Bangalore… pic.twitter.com/X43V5r5fK4
— ANI (@ANI) October 6, 2023

LEAVE A REPLY

Please enter your comment!
Please enter your name here