ಬೆಂಗಳೂರು:
ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,26,58,618 ರೂ. ಮೌಲ್ಯದ 2ಕೆ.ಜಿ. 79 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ನ.17ರಂದು ಮಸ್ಕತ್ ನಿಂದ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದು ಸುಮಾರು 68,18,812 ರೂ. ಮೌಲ್ಯದ 1113.07 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕ ಸೊಂಟದ ಬೆಲ್ಟ್ ಪೌಚ್ ನಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದನು.
#IndianCustomsAtWork Officers of Bengaluru Air Customs intercepted a Passenger who arrived from Muscat on 17.11.2023 and seized approx. 1113.07 grams of Gold worth Rs 68,18,812/-. Pax was attempting to Smuggle Gold in Waist Belt Pouch. pic.twitter.com/dPkTseZ87n
— Bengaluru Customs (@blrcustoms) November 17, 2023
ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ನ.16ರಂದು ಬ್ಯಾಂಕ್ ನಿಂದ ಆಗಮಿಸುತ್ತಿದ್ದ ಮೂರು ಜನರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಕೊಲಂಬೊದಿಂದ ಬಂದ ಇಬ್ಬರು ಮಹಿಳೆಯರಿಂದ ಸುಮಾರು 58,39,806 ರೂ. ಮೌಲ್ಯದ 966 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಮಹಿಳಾ ಪ್ರಯಾಣಿಕರು ಶರ್ಟ್ ಮತ್ತು ಒಳ ಉಡುಪುಗಳಲ್ಲಿ ಚಿನ್ನದ ಸರದ ಪೀಸ್ ಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.
#IndianCustomsAtWork Bengaluru Air Customs intercepted 3 men arriving from Bangkok; 2 ladies from Colombo on 16.11.2023 leading to seizure of approx. 966 gm of Gold worth Rs.58,39,806/- Gold chains were concealed under Shirts & Cut Pieces of Gold Chain in Innerwear, etc. pic.twitter.com/u3lHYUBi9F
— Bengaluru Customs (@blrcustoms) November 17, 2023
ಮೂರು ಪ್ರಕರಣಗಳಿಂದ ಒಟ್ಟು 1,26,58,618 ರೂ. ಮೌಲ್ಯದ 2 ಕೆಜಿ 79 ಗ್ರಾಂ ತೂಕದ ಚಿನ್ನ ಪತ್ತೆಯಾಗಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.