ಕಾನ್ ಸಿಟಿ ಜನರು ತಮ್ಮ ವೈಯಕ್ತಿಕ ಖಾಸಗಿ ವಾಹನಗಳ ಬದಲಿಗೆ ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ಏಕೆ ಬಳಸುತ್ತಿಲ್ಲ, ಸಾರ್ವಜನಿಕ ಸಾರಿಗೆ ಬಳಸಲು ಅವರಿಗೆ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಮತ್ತು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾ ಸಮೀಕ್ಷೆ ಕೈಗೊಳ್ಳುತ್ತಿವೆ. ಬೆಂಗಳೂರು: ಸಿಲಿಕಾನ್ ಸಿಟಿ ಜನರು ತಮ್ಮ ವೈಯಕ್ತಿಕ ಖಾಸಗಿ ವಾಹನಗಳ ಬದಲಿಗೆ ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ಏಕೆ ಬಳಸುತ್ತಿಲ್ಲ, ಸಾರ್ವಜನಿಕ ಸಾರಿಗೆ ಬಳಸಲು ಅವರಿಗೆ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (B.PAC) ಮತ್ತು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾ (WRI) ಸಮೀಕ್ಷೆ ಕೈಗೊಳ್ಳುತ್ತಿವೆ.
ಹೆಚ್ಚಿನ ಮಂದಿ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ, ಆದರೆ ಮೆಟ್ರೊ ನಿಲ್ದಾಣಗಳಿಗೆ ಬಸ್‌ಗಳ ಕೊರತೆ, ಫುಟ್‌ಪಾತ್‌ನ ಕಳಪೆ ಸ್ಥಿತಿ, ಪ್ರಸ್ತುತ ಪ್ರಯಾಣದ ವಿಧಾನಕ್ಕೆ ತೆಗದುಕೊಳ್ಳುವ ಹೆಚ್ಚಿನ ಸಮಯ, ಆಟೋಗಳ ಕೊರತೆ ಮುಂತಾದ ಸಮಸ್ಯೆಗಳನ್ನು #Personal2Public Bengaluru Commuter Survey ಎಂಬ ಶೀರ್ಷಿಕೆಯ ಸಮೀಕ್ಷೆಯಲ್ಲಿ ಪಟ್ಟಿ ಮಾಡಲಾಗುತ್ತದೆ.
ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ಸಂಸ್ಥೆಗಳು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರ ಗಮನಕ್ಕೆ: 1 ತಿಂಗಳವರೆಗೆ ಪ್ರತಿದಿನ 2 ಗಂಟೆ ಕಾಲ ಈ ಮಾರ್ಗದ ರೈಲು ಸಂಚಾರ ಸ್ಥಗಿತ!
ಬೆಂಗಳೂರು ಸಂಚಾರ ದಟ್ಟಣೆಗೆ ಕುಖ್ಯಾತವಾಗಿದೆ. ಹೆಚ್ಚಿನ ಟೆಕ್ ಹಬ್‌ಗಳು ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ಸ್ ಸಿಟಿ, ಮಹದೇವಪುರ ಮತ್ತು ಹೊರ ವರ್ತುಲ ರಸ್ತೆಯಂತಹ ಪ್ರದೇಶಗಳಲ್ಲಿವೆ. ನಗರದ ಬಹು ನಿರೀಕ್ಷಿತ ಮೆಟ್ರೋ ಮಾರ್ಗಗಳು – ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಗೆ ಈ ವರ್ಷ ಕಾರ್ಯಾರಂಭ ಮಾಡಲಿವೆ.
ಹೀಗಾಗಿ ಈ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಗಮನಾರ್ಹವಾಗಿ ಕಡಿಮೆ ಮಾಡಬಹುದು. ನಗರದಲ್ಲಿ ಮತ್ತಷ್ಟು ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ವಾಯು ಮಾಲಿನ್ಯ ಕಡಿಮೆ ಮಾಡಲು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆ ವಿಧಾನಗಳನ್ನು ಹೆಚ್ಚು ಬಳಸುವ ಅಗತ್ಯವಿದೆ ಎಂದು ಬಿ.ಪಿಎಸಿಯ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ: ಕಾಮಗಾರಿ ವೇಳೆ ನೆಲಕ್ಕುರುಳಿದ ಕ್ರೇನ್, ತಪ್ಪಿದ ಭಾರೀ ಅನಾಹುತ
ಇದುವರೆಗೂ ಭಾರತದ ಯಾವುದೇ ನಗರದಲ್ಲಿ ಇಂತಹ ಸಮಿಕ್ಷೆ ನಡೆದಿಲ್ಲ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ರೀತಿಯ ಸರ್ವೆ ನಡೆಯಲಿದೆ, ಬೆಂಗಳೂರಿನಾದ್ಯಂತ ಕಾರ್ಪೊರೇಟ್ ಕಂಪನಿಗಳು, ನಿವಾಸಿ ಕಲ್ಯಾಣ ಸಂಘಗಳು ಮತ್ತು ನಾಗರಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಎರಡು ವಾರಗಳವರೆಗೆ ಸಮೀಕ್ಷೆ ಮುಂದುವರಿಯುತ್ತದೆ WRI ಶ್ರೀನಿವಾಸ್ ಅಲವಿಲ್ಲಿ ತಿಳಿಸಿದ್ದಾರೆ.
ಪರ್ಸನಲ್ 2 ಪಬ್ಲಿಕ್, ಸರ್ವೇ ಕಾರ್ಪೊರೇಟ್‌ಗಳು ಮತ್ತು ನಾಗರಿಕರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿದೆ. ಮೆಟ್ರೋ ನಿಲ್ದಾಣಗಳಿಗೆ ಮೊದಲ ಮತ್ತು ಕೊನೆಯ ಮೈಲಿ ಪ್ರವೇಶವನ್ನು ಉತ್ತಮಗೊಳಿಸಲು ಎಲ್ಲಾ ಮಧ್ಯಸ್ಥಗಾರರೊಂದಿಗೆ ಪೂರ್ವಭಾವಿಯಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೈಕೊಟ್ಟ ಸಿಗ್ನಲ್ ಸಿಸ್ಟಮ್: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನರ ಪರದಾಟ!
ಸಮೀಕ್ಷೆಯು ಎಲ್ಲರಿಗೂ ಮುಕ್ತವಾಗಿದೆ, ವೈಟ್‌ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಹೊರ ವರ್ತುಲ ರಸ್ತೆ ಪ್ರದೇಶಗಳಲ್ಲಿನ ಪ್ರಯಾಣಿಕರು ಮತ್ತು ನಿವಾಸಿಗಳು ಹೆಚ್ಚಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
BMRCL, BMTC, BBMP ಮತ್ತು DULT ಯ ಪ್ರಮುಖ ಪ್ರತಿನಿಧಿಗಳಿಗೆ ನಗರ ಮತ್ತು ನಿಲ್ದಾಣದ ಮಟ್ಟದಲ್ಲಿ ಸಮೀಕ್ಷೆ ತಂಡವು ಕಾರ್ಯಸಾಧ್ಯವಾದ ಪರಿಹಾರಗಳನ್ನು ನೀಡುವ ಮೂಲಕ ಸಮೀಕ್ಷೆಯ ಫಲಿತಾಂಶಗಳನ್ನು ಲಭ್ಯವಿರುವ ಡೇಟಾ ವಿಶ್ಲೇಷಣೆಗೆ ಮ್ಯಾಪ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.