Home Uncategorized ಬೆಂಗಳೂರು: 1,800 ಉದ್ಯೋಗ ಆಕಾಂಕ್ಷಿಗಳಿಗೆ ವಂಚಿಸಿದ ಎಜುಟೆಕ್ ಕಂಪನಿಯ ಎಂಡಿ ಬಂಧನ

ಬೆಂಗಳೂರು: 1,800 ಉದ್ಯೋಗ ಆಕಾಂಕ್ಷಿಗಳಿಗೆ ವಂಚಿಸಿದ ಎಜುಟೆಕ್ ಕಂಪನಿಯ ಎಂಡಿ ಬಂಧನ

21
0

ಎಜುಟೆಕ್ ಕಂಪನಿ ಆರಂಭಿಸಿ 1800 ಉದ್ಯೋಗ ಆಕಾಂಕ್ಷಿಗಳಿಗೆ ವಂಚಿಸಿದ ಆಂಧ್ರ ಪ್ರದೇಶದ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು: ಎಜುಟೆಕ್ ಕಂಪನಿ ಆರಂಭಿಸಿ 1800 ಉದ್ಯೋಗ ಆಕಾಂಕ್ಷಿಗಳಿಗೆ ವಂಚಿಸಿದ ಆಂಧ್ರ ಪ್ರದೇಶದ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಜಯನಗರ 6ನೇ ಬ್ಲಾಕ್‌ನಲ್ಲಿರುವ ಗೀಕ್ ಲರ್ನ್ ಎಜುಟೆಕ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಕಮಲಾಪುರಂ ಶ್ರೀನಿವಾಸ ಕಲ್ಯಾಣ್(40) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆಸ್ಟ್ರೇಲಿಯನ್ ಕಾನ್ಸುಲೇಟ್ ಕಚೇರಿ ಆರಂಭ

ಕಂಪನಿಯು ಡೇಟಾ ಸೈನ್ಸ್‌ನಲ್ಲಿ ಆನ್‌ಲೈನ್ ಕೋರ್ಸ್ ಆರಂಭಿಸಿ, ಜನರಿಗೆ ಉದ್ಯೋಗಾವಕಾಶ ನೀಡುವ ಭರವಸೆ ನೀಡಿತ್ತು. 1,800 ಕ್ಕೂ ಹೆಚ್ಚು ಜನರನ್ನು ಕೋರ್ಸ್‌ಗಳಿಗೆ ದಾಖಲಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಈ ಕಂಪನಿಯು ಹಲವಾರು ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು ಮತ್ತು ಅವರು ವಿದ್ಯಾರ್ಥಿಗಳ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಶಿಕ್ಷಣ ಸಾಲ ಪಡೆದು, ನಂತರ ಕಂಪನಿಯನ್ನು ಬಂದ್ ಮಾಡಿದ್ದಾರೆ. ದೂರುಗಳ ಆಧಾರದ ಮೇಲೆ, ವಂಚನೆ ಪ್ರಕರಣ ದಾಖಲಿಸಿಕೊಂಡು  ಕಂಪನಿಯ ಎಂಡಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here