ವಿಶ್ವ ಮಾದಕವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ವಿಶೇಷ ಅಭಿಯಾನ ನಡೆಸಿದ ನಗರದ ಪೊಲೀಸರು, ಸೋಮವಾರ ರೂ. 21 ಕೋಟಿ ಮೌಲ್ಯದ 2,117 ಕೆ.ಜಿ ಡ್ರಗ್ಸ್ ನಾಶಪಡಿಸಿದರು. ಬೆಂಗಳೂರು: ವಿಶ್ವ ಮಾದಕವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ವಿಶೇಷ ಅಭಿಯಾನ ನಡೆಸಿದ ನಗರದ ಪೊಲೀಸರು, ಸೋಮವಾರ ರೂ. 21 ಕೋಟಿ ಮೌಲ್ಯದ 2,117 ಕೆ.ಜಿ ಡ್ರಗ್ಸ್ ನಾಶಪಡಿಸಿದರು.
ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 2,053 ಕೆ.ಜಿ ಗಾಂಜಾ, 9 ಕೆ.ಜಿ ಹಶೀಷ್, 12 ಕೆ.ಜಿ ಅಫೀಮು, 9 ಕೆ.ಜಿ ಚರಸ್, 568 ಗ್ರಾಂ ಕೊಕೇನ್, 13 ಗ್ರಾಂ ಹೆರಾಯಿನ್, 5 ಕೆ.ಜಿ ಎಂಡಿಎಂಎ ಅನ್ನು ಕೋರ್ಟ್ ಆದೇಶ ಪಡೆದು ನಾಶಪಡಿಸಿದ್ದಾರೆ.
ಇದನ್ನೂ ಓದಿ: 70 ಕೋಟಿ ರೂ. ಮೌಲ್ಯದ ಡ್ರಗ್ಸ್ ದಂಧೆ ಪ್ರಕರಣ: ಬಿಜೆಪಿ ಮುಖಂಡನ ಪುತ್ರ ಬಂಧನ?
ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ 2022ರ ಜನವರಿಯಿಂದ 2023ರ ಜೂನ್‌ವರೆಗೆ 6,191 ಪ್ರಕರಣ ದಾಖಲಾಗಿದೆ. ಈ ಸಂಬಂಧ 7,723 ಭಾರತೀಯರು, 159 ವಿದೇಶಿಯರನ್ನು ಬಂಧಿಸಿದ್ದು,ರೂ. 117 ಕೋಟಿ ಮೌಲ್ಯದ 6,261 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.
‘ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಡ್ರಗ್ಸ್ ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ’ ಕುರಿತು ಸಮಾವೇಶದ ಭಾಗವಾಗಿ ರೂ.92 ಕೋಟಿ ಮೌಲ್ಯದ 4,397 ಕೆ.ಜಿ ಡ್ರಗ್ಸ್ ನಾಶಪಡಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಹೇಳಿದರು.
ಅಲ್ಲದೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ 388 ಶಾಲೆಗಳು, 253 ಕಾಲೇಜುಗಳು ಮತ್ತು 51 ವೃತ್ತಿಪರ ಕಾಲೇಜುಗಳಿಗೆ ಭೇಟಿ ನೀಡಿದ್ದು, 1.73 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾದಕವಸ್ತುಗಳಿಂದಾಗುವ ದುಷ್ಪರಿಣಾಮಗಳು ಮತ್ತು NDPS ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆಂದು ತಿಳಿಸಿದರು.