Home Uncategorized ಬೆಳಗಾವಿಯಲ್ಲಿ ಹರಾಜು ಮೂಲಕ ನಿವೇಷನ ಹಂಚಿಕೆ: ಬಿಯುಡಿಎ ಆಯುಕ್ತರ ವಿರುದ್ಧ ಲೋಕಾಯುಕ್ತ ಎಫ್ಐಆರ್

ಬೆಳಗಾವಿಯಲ್ಲಿ ಹರಾಜು ಮೂಲಕ ನಿವೇಷನ ಹಂಚಿಕೆ: ಬಿಯುಡಿಎ ಆಯುಕ್ತರ ವಿರುದ್ಧ ಲೋಕಾಯುಕ್ತ ಎಫ್ಐಆರ್

29
0

ಸೆಷನ್ಸ್ ನ್ಯಾಯಾಧೀಶರ ನಿರ್ದೇಶನದ ಆಧಾರದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬಿಯುಡಿಎ) ಆಯುಕ್ತ ಪ್ರೀತಮ್ ನಸ್ಲಾಪುರೆ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.  ಬೆಳಗಾವಿ: ಬೆಳಗಾವಿ ನಗರದಲ್ಲಿ ಹಲವು ವಸತಿ ನಿವೇಷನಗಳನ್ನು ಹರಾಜು ಮೂಲಕ ಹಂಚಿಕೆ ಪ್ರಕರಣದಲ್ಲಿ 4 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ನಿರ್ದೇಶನದ ಆಧಾರದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬಿಯುಡಿಎ) ಆಯುಕ್ತ ಪ್ರೀತಮ್ ನಸ್ಲಾಪುರೆ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಬೆಳಗಾವಿಯ ಪ್ರಮುಖ ನಾಯಕ ರಾಜೀವ್ ತೋಪಣ್ಣವರ್ ನಸ್ಲಾಪುರೆ ವಿರುದ್ಧ ದೂರು ನೀಡಿ, ನಸ್ಲಾಪುರೆ ಹಲವು ಅಭಿವೃದ್ಧಿಪಡಿಸಿದ ವಸತಿ ನಿವೇಶನಗಳನ್ನು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಮಾನವ ಚಾಲಿತ ಹರಾಜಿನ ಮೂಲಕ ಹಂಚಿಕೆ ಮಾಡಿದ್ದರು. ಮಾರ್ಚ್ 19, 2022 ರಂದು ಪ್ರಮುಖ ನಿವೇಶನಗಳನ್ನು, ಕಾರ್ನರ್ ಸೈಟ್ ಗಳನ್ನು ಹರಾಜು ಹಾಕಿದ್ದರು ಎಂದು ತೋಪಣ್ಣವರ್ ಆರೋಪಿಸಿದ್ದಾರೆ. ಈ ಅಕ್ರಮದಿಂದಾಗಿ ಬಿಯುಡಿಎಗೆ 100-150 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದ್ದರು.

ಇದಷ್ಟೇ ಅಲ್ಲದೇ ಬಿಯುಡಿಎ ಹರಾಜು ಮೂಲಕ ನಿವೇಶನಗಳನ್ನು ಅಕ್ರಮವಾಗಿ ಹರಾಜು ಹಾಕಲು ದಾಖಲೆಗಳನ್ನು ಸೃಷ್ಟಿಸಿದೆ ಎಂದೂ ತೋಪಣ್ಣವರ್ ಹೇಳಿದ್ದಾರೆ. ನಸ್ಲಾಪುರೆ ಮತ್ತು ಇತರ ಬಿಯುಡಿಎ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ ಮಂಗಳವಾರ ಖಚಿತಪಡಿಸಿದ್ದಾರೆ.

LEAVE A REPLY

Please enter your comment!
Please enter your name here