Home Uncategorized ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಜಗಳ; ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಹತ್ಯೆ

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಜಗಳ; ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಹತ್ಯೆ

50
0

ತಾಲ್ಲೂಕಿನ ಶಿಂಧೋಳಿ ಗ್ರಾಮದಲ್ಲಿ ಭಾನುವಾರ ರಾತ್ರಿ, ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಗಾವಿ: ತಾಲ್ಲೂಕಿನ ಶಿಂಧೋಳಿ ಗ್ರಾಮದಲ್ಲಿ ಭಾನುವಾರ ರಾತ್ರಿ, ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಶಿಂಧೋಳಿ ಗ್ರಾಮದ ಬಸವರಾಜ (24) ಹಾಗೂ ಗಿರೀಶ (28) ಕೊಲೆಯಾದವರು. ಶಿಂಧೋಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಸಂಜೆ 7ರ ಸುಮಾರಿಗೆ ಯುವಕರು ಆಟವಾಡುತ್ತಿದ್ದರು.

ಇದೇ ವೇಳೆ ಹಾಲಿನ ಡೇರಿಯ ವಾಹನ ಓಡಿಸುವ ಚಾಲಕ ಇದೇ ಸ್ಥಳಕ್ಕೆ ಬಂದು ವಾಹನ ನಿಲ್ಲಿಸಿದ. ಈ ವೇಳೆ ಕ್ರಿಕೆಟ್ ಆಡುವ ಇಬ್ಬರು ಯುವಕರು ಹಾಗೂ ವಾಹನ ಚಾಲಕನ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡತೊಡಗಿದರು.

ಇದರ ಮಧ್ಯೆಯೇ ತನ್ನ ಬಳಿ ಇದ್ದ ಚಾಕು ತಂದ ಡೇರಿ ವಾಹನದ ಚಾಲಕ ಇಬ್ಬರೂ ಯುವಕರ ಮೇಲೆ ಹಲ್ಲೆ ಮಾಡಿದ. ಮನಸೋ ಇಚ್ಛೆ ಚುಚ್ಚಿದ ಎಂದು ಜತೆಯಲ್ಲಿದ್ದವರು ಮಾಹಿತಿ ನೀಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲಿದ ಯುವಕರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ಮುಟ್ಟುವುದರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here