ಘಟಪ್ರಭಾ ನದಿಗೆ ಈಜಲು ಹೋಗಿದ್ದ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ: ಘಟಪ್ರಭಾ ನದಿಗೆ ಈಜಲು ಹೋಗಿದ್ದ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಗೋಕಾಕ್ ತಾಲೂಕಿನ ಧೂಪದಾಳ ಪಟ್ಟಣದ ಪ್ರವಾಸಿ ಮಂದಿರದ ಬಳಿ ಈ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಈಜಾಡಲೆಂದು ಆರು ಯುವಕರ ತಂಡ ನದಿಗೆ ಹೋಗಿತ್ತು. ಈ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ಕೆಎಸ್ಆರ್ ಟಿಸಿ ಬಸ್ ಕಾರು ನಡುವೆ ಭೀಕರ ಅಪಘಾತ; ಆರು ಮಂದಿ ದುರ್ಮರಣ
ಮೃತರು ಘಟಪ್ರಭಾದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಎನ್ನಲಾಗಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.