Home Uncategorized ಬೆಳಗಾವಿ| ಪ್ರೇಮಿಗಳೆಂದು ಭಾವಿಸಿ ಅಕ್ಕ– ತಮ್ಮನ ಮೇಲೆ ಹಲ್ಲೆ: 8 ಆರೋಪಿಗಳ ಬಂಧನ

ಬೆಳಗಾವಿ| ಪ್ರೇಮಿಗಳೆಂದು ಭಾವಿಸಿ ಅಕ್ಕ– ತಮ್ಮನ ಮೇಲೆ ಹಲ್ಲೆ: 8 ಆರೋಪಿಗಳ ಬಂಧನ

40
0

ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ  ಮಾತನಾಡುತ್ತ ಕುಳಿತಿದ್ದ ಅಕ್ಕ– ತಮ್ಮನನ್ನು ಪ್ರೇಮಿಗಳೆಂದು ಭಾವಿಸಿ ಎಳೆದೊಯ್ದ ಎಂಟು ಆರೋಪಿಗಳ ತಂಡ, ಮನಸೋ ಇಚ್ಚೆ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಬೆಳಗಾವಿ ತಾಲೂಕಿನ ಯಮನಾಪುರ ಗ್ರಾಮದ ಸಚಿನ್‌ ಲಮಾನಿ (22) ಹಾಗೂ ಮುಸ್ಕಾನ್‌ ಪಟೇಲ್‌ (23) ಹಲ್ಲೆಗೆ ಒಳಗಾದವರು. 

ಯುವನಿಧಿಗೆ ಅರ್ಜಿ ಸಲ್ಲಿಸಲು ಬೆಳಗಾವಿಗೆ ಬಂದಿದ್ದರು. ಸೈಬರ್ ಕೇಂದ್ರದಲ್ಲಿ ಸರ್ವರ್‌ ಸಮಸ್ಯೆ ಇದ್ದಿದ್ದರಿಂದ ಕೆಲಸ ಸ್ಥಗಿತವಾಗಿತ್ತು. ಸಮಯ ಕಳೆಯಲು ಇಬ್ಬರೂ ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಬಂದು ಮಾತನಾಡುತ್ತಾ ಕುಳಿತಿದ್ದರು.

ಈ ವೇಳೆ ಆರೋಪಿಗಳ ಗುಂಪು ನಮ್ಮತ್ತ ಧಾವಿಸಿ  ಏಕಾಏಕಿ ಹಲ್ಲೆ ಮಾಡಿದರು. ನೀವು ಯಾರು, ಏನು ಸಂಬಂಧ ಎಂದೆಲ್ಲ ಪ್ರಶ್ನೆ ಮಾಡಿ ನಮ್ಮನ್ನು ಎಳೆದುಕೊಂಡು ಹತ್ತಿರದ ರೂಮಿಗೆ ಕರೆದುಕೊಂಡು ಹೋದರು. ಮೂರು ಗಂಟೆ ರೂಮಿನಲ್ಲಿ ಕೂಡಿಹಾಕಿ, ಮನಸೋ ಇಚ್ಚೆ ಥಳಿಸಿದರು ಎಂದು ಗಾಯಗೊಂಡ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಯುವಕ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಅವರನ್ನು ಕೂಡಿ ಹಾಕಿದ ಲೊಕೇಷನ್‌ ಪತ್ತೆ ಮಾಡಿದ ನಗರ ಪೊಲೀಸರು ಇಬ್ಬರನ್ನೂ ರಕ್ಷಿಸಿದರು.

ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

8 ಆರೋಪಿಗಳ ಬಂಧನ, 17 ಮಂದಿ‌ ವಿರುದ್ಧ ಪ್ರಕರಣ

‘ಈ ಪ್ರಕರಣ ಸಂಬಂಧ ಭಾನುವಾರ ಎಂಟು ಮಂದಿಯನ್ನು ಬಂಧಿಸಿದ್ದೇವೆ‌. 17 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎಸ್‌.ಎನ್.ಸಿದ್ರಾಮಪ್ಪ ತಿಳಿಸಿದರು.

LEAVE A REPLY

Please enter your comment!
Please enter your name here